ಬಕ್ಸಾರ್ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ 
ದೇಶ

ನಿತೀಶ್ ಕಂಪ್ಯೂಟರ್ ಗೆ "ಲಾಲು ವೈರಸ್" ದಾಳಿ: ಪ್ರಧಾನಿ ಮೋದಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಂಪ್ಯೂಟರ್ ಗೆ ಲಾಲು ಎಂಬ ವೈರಸ್ ನ ದಾಳಿಯಾಗಿದ್ದು, ನಿತೀಶ್ ಕಂಪ್ಯೂಟರ್ ಕಾರ್ಯಸ್ಥಗಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...

ಬಕ್ಸಾರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಂಪ್ಯೂಟರ್ ಗೆ ಲಾಲು ಎಂಬ ವೈರಸ್ ನ ದಾಳಿಯಾಗಿದ್ದು, ನಿತೀಶ್ ಕಂಪ್ಯೂಟರ್ ಕಾರ್ಯಸ್ಥಗಿತವಾಗಿದೆ ಎಂದು ಪ್ರಧಾನಿ  ನರೇಂದ್ರ ಮೋದಿ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಕ್ಸಾರ್ ನಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ನಿತೀಶ್ ಮತ್ತು ಲಾಲು  ಪ್ರಸಾದ್ ಅವರು ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಲು ಎಷ್ಟೇ ಕೆಸರೆರಚಾಟದಲ್ಲಿ ತೊಡಗಿದರೂ ಪ್ರಯೋಜನವಿಲ್ಲ. ಏಕೆಂದರೆ ಕೆಸರಲ್ಲೇ ಕಮಲ ಅರಳಿ ಬರುತ್ತದೆ. ಆ ಮೂಲಕ  ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಅವರ ದುರಾಡಳಿತ ಬಿಹಾರದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದರು.

"ಬಿಹಾರ ಅಭಿವೃದ್ಧಿಗಾಗಿ ನಿತೀಶ್ ಮತ್ತು ಲಾಲು ಪ್ರಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ತಮ್ಮ ಏಕೈಕ ಗುರಿಯಾಗಿದ್ದು, ನೆರೆಯ ರಾಜ್ಯದವನಾದ ನನಗೆ ಬಿಹಾರದಲ್ಲಿ ತಪ್ಪು ಮಾಡುತ್ತಿರುವವರನ್ನು ಪ್ರಶ್ನಿಸುವ ಹಕ್ಕಿದೆ ಮತ್ತು ಅವರಿಗೆ ಚುನಾವಣೆಯಲ್ಲಿ ಸೋಲುಣಿಸುವ ಮೂಲಕ ತಕ್ಕ ಶಾಸ್ತಿ ಮಾಡಿ ಎಂದು ಹೇಳುವ ಅಧಿಕಾರವಿದೆ. ಇದಕ್ಕೆ ಸರಿಯಾದ ಸಮಯ  ಈಗ ಬಂದಿದ್ದು, ತಂತ್ರ-ಮಂತ್ರ ಬೇಕೇ ಅಥವಾ ಲೋಕತಂತ್ರ ಬೇಕೆ ಎಂಬುದನ್ನು ನೀವೇ ನಿರ್ಧರಿಸಿ" ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಒಟ್ಟಾರೆ ಬಿಹಾರ ಚುನಾವಣೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಇದೇ ನವೆಂಬರ್ 8ರಂದು ಮೂರನೇ ಹಂತದ ಮತದಾನ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ