ದೇಶ

ನಿತಿಶ್ ನೇತೃತ್ವದ 'ಮಹಾ ಮೈತ್ರಿ'ಯನ್ನು 3 ಇಡಿಯೇಟ್ಸ್ ಎಂದ ಪ್ರಧಾನಿ

Lingaraj Badiger

ಪಾಟ್ನಾ: ಬಿಹಾರ ವಿಧಾನಸಭೆಗೆ 3 ಹಂತದ ಮತದಾನ ನಡೆಯುವ ಮುನ್ನಾ ದಿನವಾದ ಮಂಗಳವಾರ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ನ ಮಹಾ ಮೈತ್ರಿಯನ್ನು 'ತ್ರೀ ಇಡಿಯೇಟ್ಸ್‌' ಎಂದು ಕರೆದಿದ್ದಾರೆ.

'ಲಾಲು ಪ್ರಸಾದ್ ಯಾದವ್ ಅವರು ಒಳ್ಳೆಯ ಮನರಂಜನೆ ಕೊಡುತ್ತಾರೆ ಮತ್ತು ಹಲವು ವರ್ಷಗಳಿಂದ ಅವರು ಮನರಂಜನೆ ಕೊಡುತ್ತಾ ಬಂದಿದ್ದಾರೆ. ಆದರೆ ಇತ್ತೀಚಿಗೆ ಅಪರಾಧಿಗಳ ರಕ್ಷಣೆ, ಸತ್ಯ ಹೇಳುವುದು ಸೇರಿದಂತೆ ಹಲವು ವಿಷಯಗಳಲ್ಲಿ ಲಾಲುಜಿ ಹಾಗೂ ನಿತಿಶ್ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದೆ. ಇದು ಸಹ ಒಂಥರ ಮನರಂಜಯೇ' ಎಂದು ಪ್ರಧಾನಿ ವ್ಯಂಗ್ಯವಾಡಿದರು.

ಸಿತಾಮರ್‌ಹಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತುಂಬಾ ಜಾಗೃತೆಯಿಂದ ಮತ ಚಲಾಯಿಸುವಂತೆ ಕರೆ ನೀಡಿದರು.

'ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಬೇಕು. ಅಭಿವೃದ್ಧಿ ಮೂಲಕವೇ ಅದು ಸಾಧ್ಯ. ಒಂದು ಕೈಯಲ್ಲಿ ಅಭಿವೃದ್ಧಿ ಇದೆ. ಮತ್ತೊಂದು ಕೈಯಲ್ಲಿ ಅವಕಾಶವಾದಿಗಳಿದ್ದಾರೆ. ಯಾವುದು ಬೇಕು ಅಂತ ನೀವೇ ನಿರ್ಧರಿಸಿ' ಎಂದರು.

SCROLL FOR NEXT