ನವದೆಹಲಿ: ಇದು ಕಾಕತಾಳೀಯವೋ ಅಥವಾ ನಿಜಕ್ಕೂ ಹಾಗೇನಾದರೂ ಸಂಬಂಧವಿದೆಯೋ ಗೊತ್ತಿಲ್ಲ. ಭೂಕಂಪಕ್ಕೂ ದಿನಾಂಕ 26ಕ್ಕೂ ಹಲವು ದಶಕಗಳ ನಂಟಿದೆ.
ಭೂಕಂಪ ಮಾತ್ರವಲ್ಲ, ಹಲವು ನೈಸರ್ಗಿಕ ವಿಕೋಪಗಳು 26ನೇ ತಾರೀಕಿನಂದೇ ಸಂಭವಿಸಿವೆ. 13 ಅಪಶಕುನದ ಸಂಖ್ಯೆ ಅಂತಾರೆ. ಇದು ಹದಿಮೂರರ ಡಬಲ್. ಅಂದ್ರೆ ದುಪ್ಪಟ್ಟು ಅಪಶಕುನ ಅಂತಿರಬಹುದಾ? ಇರಲಿ ಈ ಪಟ್ಟಿಯನ್ನೊಮ್ಮೆ ಗಮನಿಸಿ.
ಇದೆಲ್ಲದರ ಜೊತೆ ಮುಂಬೈಯನ್ನು ನಡುಗಿಸಿದ ಉಗ್ರದಾಳಿಯೂ 2008ರ ನ.26ರಂದೇ ನಡೆದಿದೆ. ಕ್ರಕಟವ್‍ನಲ್ಲಿ ಜ್ವಾಲಾಮುಖಿ ಸ್ಫೋಟ ನಡೆದದ್ದು ಆ.26ರಂದು. ಮೆರಾಪಿ ಜ್ವಾಲಾಮುಖಿ ಸ್ಫೋಟಿಸಿದ್ದು ಅ.26ರಂದು. ಮೆಂಟಾವಾಯ್ ಸುನಾಮಿ ಅ.26ರಂದೇ ಅಪ್ಪಳಿಸಿತ್ತು.
ಮುಂಬೈ ಪ್ರವಾಹ ಸಂಭವಿಸಿದ್ದೂ ಜು.26ರಂದೇ! ಸಾವಿರ ಸಾವುಗಳಿಗೆ ಕಾರಣವಾದ ಸಬಾ ಟೈಡಲ್ ವೇವ್ಸ್ 1996ರ ಡಿ.26ರಂದೇ ಸಂಭವಿಸಿತ್ತು. ಇದೀಗ ಮತ್ತೊಂದು 26, ಅಂದರೆ ಅಕ್ಟೋಬರ್ 26 ಮತ್ತೊಂದು ಭೂಕಂಪಕ್ಕೆ ಸಂಭವಿಸಿದೆ.
ಹಿಂದೂಮಹಾಸಾಗರ ಸುನಾಮಿ 26-12-2004
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos