ದೇಶ

ಯುವಕನ ತೊಡೆಯಿಂದ 55 ಕೆಜಿ ಮಾಂಸದ ಗಡ್ಡೆ ಹೊರತೆಗೆದ ವೈದ್ಯರು

Mainashree
ನವದೆಹಲಿ: ಯುವಕನ ತೊಡೆಯಲ್ಲಿ ಇದ್ದ ಬರೋಬ್ಬರಿ 55 ಕೆಜಿ ತೂಕದ ಮಾಂಸದ ಗಡ್ಡೆಯನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. 
ಜೀವನ್ಮರಣ ಹೋರಾಟದಲ್ಲಿ ನರಳಾಡುತ್ತಿದ್ದ 26 ವರ್ಷದ ಗುರ್ಮಿತ್ ಸಿಂಗ್ ಅವರ ಬಲ ತೊಡೆಯಲಿದ್ದ 55 ಕೆಜಿ ತೂಕದ ಮಾಂಸದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. 
ಸಾಕೇತ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಗುರ್ಮಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಗುರ್ಮಿತ್ ಸಿಂಗ್ ಅವರ ಬಲ ತೊಡೆಯ ಮೇಲೆ ಈ ಗಡ್ಡೆ ಬೆಳೆಯುತ್ತಾ ಬಂದಿದೆ. ಗುರ್ಮಿತ್ ಅವರು 37 ಕೆಜಿ ಇದ್ದು, ಆ ಮಾಂಸದ ಗಡ್ಡೆ 55 ಕೆಜಿ ತೂಕ ಹೊಂದಿತ್ತು. ಇದರಿಂದ ಅವರ ಜೀವಕ್ಕೆ ಅಪಾಯ ಎದುರಾಗಿತ್ತು. 
ಇದಕ್ಕಾಗಿ ಜಲಂದರ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಗಮಿಸಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಗುರ್ಮಿತ್ ಬಲ ತೊಡೆಯಲ್ಲಿದ್ದ 55 ಕೆಜಿ ತೂಕದ ಮಾಂಸದ ಗಡ್ಡೆಯನ್ನು ಹೊರ ತೆಗೆಯಲಾಗಿದೆ. ಗುರ್ಮಿತ್ ಪ್ರಾಣಪ್ರಾಯದಿಂದ ಪಾರಾಗಿದ್ದು, ವಾಕರ್ ಹಿಡಿದು ನಡೆಯಬಲ್ಲರು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ.ದುರ್ಗಾತೋಷ್ ಪಾಂಡೆ ತಿಳಿಸಿದ್ದಾರೆ.
SCROLL FOR NEXT