ಕೇಂದ್ರ ಸಚಿವ ವೆಂಕಯ್ಯ ನಾಯ್ಡು (ಸಂಗ್ರಹ ಚಿತ್ರ) 
ದೇಶ

ಮುಷರಫ್ ಪಾಕಿಸ್ತಾನದ ಸತ್ಯವನ್ನೇ ಹೇಳಿದ್ದಾರೆ: ವೆಂಕಯ್ಯ ನಾಯ್ಡು

ಕೊನೆಗೂ ಮುಷರಫ್ ಪಾಕಿಸ್ತಾನದ ಸತ್ಯವನ್ನು ಹೊರಹಾಕಿದ್ದು, ಅವರು ಸತ್ಯವನ್ನೇ ಹೇಳಿದ್ದಾರೆ. ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುರುವಾರ ಹೇಳಿದ್ದಾರೆ...

ನವದೆಹಲಿ: ಕೊನೆಗೂ ಮುಷರಫ್ ಪಾಕಿಸ್ತಾನದ ಸತ್ಯವನ್ನು ಹೊರಹಾಕಿದ್ದು, ಅವರು ಸತ್ಯವನ್ನೇ ಹೇಳಿದ್ದಾರೆ. ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುರುವಾರ ಹೇಳಿದ್ದಾರೆ.

ಪಾಕಿಸ್ತಾನ ದೇಶವು ಉಗ್ರರಿಗೆ ಬೆಂಬಲ ಹಾಗೂ ತರಬೇತಿ ನೀಡಿದೆ ಎಂಬ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ವಲ್ಪ ಬದಲಾವಣೆಯೇನೆಂದರೆ ಮುಷರಫ್ ಇದೀಗ ಸತ್ಯ ಹೇಳಿರುವುದು. ಮುಷರಫ್ ಇದೀಗ ಸತ್ಯವನ್ನು ಹೇಳಿದ್ದಾರೆ. ಒಂದು ವೇಳೆ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡಲು ಮುಂದಾಗಿದ್ದರೆ. ಧ್ವನಿಯೆತ್ತರಿಸಿ ಮಾತನಾಡಬೇಕಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಕೆಲ ಉಗ್ರರನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.

ಮುಷರಫ್ ಅವರು ಹೇಳಿರುವ ಈ ಹೇಳಿಕೆಯಿಂದ ಪಾಕಿಸ್ತಾನ ದಾವೂದ್ ಗೂ ಬೆಂಬಲ ನೀಡಿರುವುದು ಇದರಿಂದ ಸ್ಪಷ್ಟವಾಗಿದೆ. ಈಗಾಗಲಾದರೂ ಪಾಕಿಸ್ತಾನವು ತನ್ನ ಜವಾಬ್ದಾರಿಯನ್ನು ಅರಿತು ದಾವೂದ್ ನನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.

ಮುಷರಫ್ ಅವರ ಹೇಳಿಕೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿರುವ ಹೀರೋಗಳು ನಾಯಕರು ಹೇಗೆ ಇರುತ್ತಾರೋ ಹಾಗೆಯೇ ಅಲ್ಲಿನ ಜನರಿರುತ್ತಾರೆಂಬುದು ಮುಷರಫ್ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಎಂದು ಹೇಳಿದ್ದಾರೆ.

ಪಾಕಿಸ್ತಾನದ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌, ಒಂದು ಕಾಲದಲ್ಲಿ ಪಾಕಿಸ್ತಾನದ ‘ಹೀರೊ’ಗಳಾಗಿದ್ದ ಭಯೋತ್ಪಾದಕ ಮುಖಂಡರಾದ ಒಸಾಮ ಬಿನ್‌ ಲಾಡೆನ್‌ ಹಾಗೂ ಅಯ್ಮಾನ್‌ ಅಲ್‌–ಜವಾಹಿರಿ ನಂತರ ‘ವಿಲನ್‌’ಗಳಾದರು. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವ ಉದ್ದೇಶದಿಂದ 1990ರಲ್ಲಿ ಲಷ್ಕರ್‌–ಎ–ತಯಬಾದಂತಹ  (ಎಲ್‌ಇಟಿ) ಉಗ್ರರ ಸಂಘಟನೆಗಳಿಗೆ ಪಾಕಿಸ್ತಾನ ಉತ್ತೇಜನ ನೀಡಿತ್ತು ಮತ್ತು ತರಬೇತಿಯನ್ನೂ ನೀಡಿತ್ತು ಎಂದು ಹೇಳಿದ್ದರು.

ಮುಷರಫ್ ಅವರ ಈ ಹೇಳಿಕೆ ಇದೀಗ ಹಲವು ವಿವಾದಗಳನ್ನು ಸೃಷ್ಟಿಮಾಡಿದ್ದು, ಸ್ವತಃ ಪಾಕಿಸ್ತಾನದ ಅಧಿಕಾರಿಗಳೇ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಈ ಹೇಳಿಕೆ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದು, ಪಾಕಿಸ್ತಾನ ಭಯೋತ್ಪಾದಕರ ಮನೆಯಾಗಿದೆ ಎಂಬುದು ಮುಷರಫ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ