ಸೇನಾ ಘಟಕದಲ್ಲಿ ಕೋಣ ಬಲಿ ಆಚರಣೆ ನಿಲ್ಲಿಸಲು ರಕ್ಷಣಾ ಸಚಿವಾಲಯದ ಸೂಚನೆ 
ದೇಶ

ಸೇನಾ ಘಟಕದಲ್ಲಿ ಕೋಣ ಬಲಿ ಆಚರಣೆ ನಿಲ್ಲಿಸಲು ರಕ್ಷಣಾ ಸಚಿವಾಲಯದ ಸೂಚನೆ

ಗೋಹತ್ಯೆ ನಿಷೇಧ ವಿಷಯ ಚರ್ಚೆಯಲ್ಲಿರುವಾಗಲೇ, ಭಾರತೀಯ ರಕ್ಷಣಾ ಸಚಿವಾಲಯ ಮತ್ತೊಂದು ಚರ್ಚಾಸ್ಪದ ವಿಷಯವನ್ನು ಮುಂದಿಟ್ಟಿದೆ.

ನವದೆಹಲಿ: ಗೋಹತ್ಯೆ ನಿಷೇಧ ವಿಷಯ ಚರ್ಚೆಯಲ್ಲಿರುವಾಗಲೇ, ರಕ್ಷಣಾ ಸಚಿವಾಲಯ ಮತ್ತೊಂದು ಚರ್ಚಾಸ್ಪದ ವಿಷಯವನ್ನು ಮುಂದಿಟ್ಟಿದೆ. ಸೇನೆಯ ಕೆಲವು ಘಟಕಗಳಲ್ಲಿ ಎಮ್ಮೆ/ಕೋಣಗಳನ್ನು ಹತ್ಯೆ ಮಾಡುವ ಪದ್ಧತಿ ಜಾರಿಯಲ್ಲಿದ್ದು ಇದನ್ನು ನಿಲ್ಲಿಸಬೇಕೆಂದು ರಕ್ಷಣಾ ಸಚಿವಾಲಯ ತನ್ನ ಸೇನಾ ಘಟಕಕ್ಕೆ ಸೂಚನೆ ನೀಡಿದೆ.
ಖಾಸಗಿ ಮಾಧ್ಯಮವೊಂದು ಪ್ರಕಟಿಸಿರುವ ವರದಿಯ ಪ್ರಕಾರ,  ರಕ್ಷಣಾ ಸಚಿವಾಲಯ ದಸರಾ ಸಂದರ್ಭದಲ್ಲಿ ಗೂರ್ಖಾ ರೆಜೆಮೆಂಟ್ ಸೈನಿಕರು ಕೋಣಗಳನ್ನು ಹತ್ಯೆ ಮಾಡುವುದನ್ನು ನಿಲ್ಲಿಸಬೇಕೆಂದು ಸೂಚನೆ ನೀಡಿದೆ. ದಸರಾ ಸಂದರ್ಭದಲ್ಲಿ ಕೋಣಗಳನ್ನು ಬಲಿ ಕೊಡುವುದು ಪುರಾತನ ಪದ್ಧತಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪ್ರಸ್ತುತ ಭಾರತ ಹೊಂದಿರುವ ಕಾನೂನಿಗೆ ಇದು ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಇದನ್ನು ನಿಲ್ಲಿಸಬೇಕೆಂದು ಸಚಿವಾಲಯ ಆದೇಶ ನೀಡಿದೆ.
ಈ ತಿಂಗಳ ಪ್ರಾರಂಭದಲ್ಲೇ ಈ ಆದೇಶ ಹೊರಬಿದ್ದಿದ್ದು, ಅಮಾನುಷ ಪದ್ಧತಿಯಾಗಿರುವ ಹಿನ್ನೆಲೆಯಲ್ಲಿ ಈ ಪದ್ಧತಿಯನ್ನು ಕೈಬಿಡಲು ಸೂಚಿಸಿದೆ ಎಂದು ತಿಳಿದುಬಂದಿದೆ. ಆಚರಣೆಗಳನ್ನು ಮುಂದುವರೆಸಲು ಕೆಲವರು ಇಚ್ಛಿಸುತ್ತಾರೆ. ಅದಕ್ಕಾಗಿ ಕಾನೂನು ಉಲ್ಲಂಘನೆಯಾಗಬಾರದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ