ಅಮೇಥಿ: ಸಮಾಜವಾದಿ ಪಕ್ಷದ ನಾಯಕ ರಾಕೇಶ್ ಯಾದವ್ ಅವರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಅಮೇಥಿಯ ಸುಲ್ತಾನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗುಂಡೇಟು ತಿಂದ ರಾಕೇಶ್ ಯಾದವ್ ಅವರು ಅಮೇಥಿಯ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದು, ಇಂದು ಬೆಳಿಗ್ಗೆ ತಿರುಗಾಡಲೆಂದು ಸುಲ್ತಾನಪುರ ಗ್ರಾಮದಿಂದ ಮುನ್ಶಿಗಂಜ್ ಪ್ರದೇಶಕ್ಕೆ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ರಾಕೇಶ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ದಾಳಿಯಿಂದಾಗಿ ರಾಕೇಶ್ ಯಾದವ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಇದೀಗ ಬಿಎಸ್ ಪಿ ನಾಯಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೀರಾ ಲಾಲ್ ಹೇಳಿದ್ದಾರೆ.