ಬಾಡೀಸ್ ಆಫ್ ಮದರ್ಸ್ ಪುಸ್ತಕಕ್ಕಾಗಿ ದಕ್ಷಿಣ ಭಾರತೀಯ ನಟಿ ಕಸ್ತೂರಿಯವರು ತನ್ನ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಅರೆ ನಗ್ನಳಾಗಿ ಫೋಸ್ ಕೊಟ್ಟ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ.
ಖ್ಯಾತ ಫೋಟೊಗ್ರಾಫರ್ ಜೇಡ್ ಬಿಯಲ್ ತಮ್ಮ 'ಎ ಬ್ಯೂಟಿಫುಲ್ ಬಾಡಿ ಪ್ರಾಜೆಕ್ಟ್: ದ ಬಾಡೀಸ್ ಆಫ್ ಮದರ್ಸ್' ಎಂಬ ಫೋಟೊ ಪುಸ್ತಕಕ್ಕಾಗಿ ಈ ಫೋಟೋಗಳನ್ನು ಬಳಸಿಕೊಳ್ಳಲಿದ್ದಾರೆ. ಈ ಫೋಟೊ ಬುಕ್ ಗಾಗಿ ಪ್ರಪಂಚದ ಸುಮಾರು 80 ತಾಯಂದಿರು ಸ್ವಯಂಪ್ರೇರಿತರಾಗಿ ತಮ್ಮ ಪ್ರೆಗ್ನೆನ್ಸಿ ಮತ್ತು ಡೆಲಿವರಿ ನಂತರದ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.
ಮಹಿಳೆಯ ದೇಹದ ಕುರಿತಾದ ಸಂಪೂರ್ಣ ಚಿತ್ರಣ ಈ ಪುಸ್ತಕದಲ್ಲಿ ಅಡಕವಾಗಿರಲಿವೆ. ಇದರಲ್ಲಿ ತಾಯ್ತನ, ವಯಸ್ಸು, ಕ್ಯಾನ್ಸರ್, ಗರ್ಭಪಾತ, ತೂಕ ಹೆಚ್ಚಳ, ತೂಕ ಗಳಿಕೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಫೋಟೊಗಳಿವೆ ಎಂದು ಜೇಡ್ ಬಿಯಲ್ ಹೇಳಿದ್ದಾರೆ.
ಕಸ್ತೂರಿ ತಮಿಳು, ತೆಲುಗು, ಕನ್ನಡ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಕಸ್ತೂರಿ ಅವರು ಸಹ ಇದರಲ್ಲಿ ಒಬ್ಬರಾಗಿದ್ದಾರೆ. ಕಸ್ತೂರಿ ಅವರು ಯುಎಸ್ ಮೂಲದ ವೈದ್ಯ ರವಿಕುಮಾರ್ ಎಂಬುವರನ್ನು ವಿವಾಹವಾಗಿದ್ದು ದಂಪತಿಗಳಿಗೆ ಶೋಭಿನಿ ಮತ್ತು ಸಂಕಲ್ಪ್ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.