ನವದೆಹಲಿ: ಕೇಂದ್ರ ಶಿಕ್ಷಣ ಸಲಹಾ ಮಂಡಳಿ(ಸಿಎಬಿಇ) ರಚನೆ ಅಂತಿಮವಾಗಿದ್ದು, ಇನ್ಫಿ ನಾರಾಯಣಮೂರ್ತಿ ಅವರ ಪುತ್ರ ರೋಹನ್ ನಾರಾಯಣ ಮೂರ್ತಿ ಅವರ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅವರ ಸ್ಥಾನಕ್ಕೆ ಮನೀಷ್ ಸಬರ್ವಾಲ್‍ರನ್ನು ನೇಮಿಸಿದೆ.
ಮಿಕ್ಕಂತೆ ಎಲ್ಲ ಸದಸ್ಯರ ಹೆಸರುಗಳನ್ನು ಪ್ರಧಾನಮಂತ್ರಿ ಕಚೇರಿ ಅನುಮೋದಿಸಿದೆ. ಮಂಡಳಿ ಅಧ್ಯಕ್ಷೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ
ರೋಹನ್ ಅವರ ಹೆಸರಿತ್ತು. ಅವರ ಕೈಬಿಟ್ಟಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.
ಮಿಕ್ಕಂತೆ ಐಐಟಿ ದೆಹಲಿಯ ಅಧ್ಯಕ್ಷ ವಿಜಯ್ ಭಟ್ಕರ್, ಗುಜರಾತ್ ಸೆಂಟ್ರಲ್ ವಿವಿಯ ಎಸ್‍ಎ ಬಾರಿ, ಡಿಎನ್ ಬೇಜ್ ಬೋರುವಾ, ಜವಾಹರ್ ಲಾಲ್ ಕೌರ್ ಹಾಗೂ ಶಿಕ್ಷಣ ತಜ್ಞ ಇಂದು ಮತಿ ರಾವ್ ಮಂಡಳಿಯಲ್ಲಿದ್ದಾರೆ. ಮಂಡಳಿಯ ಅವಧಿ 3 ವರ್ಷಕ್ಕೆ ಸೀಮಿತವಾಗಿರುತ್ತದೆ.