ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ) 
ದೇಶ

ಸೈದ್ಧಾಂತಿಕ ಅಸಹಿಷ್ಣುತೆಗೆ ಪ್ರಧಾನಿ ಮೋದಿ ಬಲಿ: ಅರುಣ್ ಜೇಟ್ಲಿ

ರಾಜಕೀಯ ಪಕ್ಷಗಳ ಸೈದ್ಧಾಂತಿಕ ಅಸಹಿಷ್ಣುತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಲಿಪಶುವಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ...

ನವದೆಹಲಿ: ರಾಜಕೀಯ ಪಕ್ಷಗಳ ಸೈದ್ಧಾಂತಿಕ ಅಸಹಿಷ್ಣುತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಲಿಪಶುವಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ದಾದ್ರಿ ಪ್ರಕರಣ ಮತ್ತು ಗೋಮಾಂಸ ಪ್ರಕರಣಗಳ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಣೆ ಮಾಡುತ್ತಿರುವುದನ್ನು  ವಿರೋಧಿಸಿರುವ ಅರುಣ್ ಜೇಟ್ಲಿ ಅವರು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಕಿಡಿಕಾರಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಅಭಿವೃದ್ಧಿಗೆ ಚುರುಕು ಮುಟ್ಟಿಸಲು ಪ್ರಯತ್ನಿಸುತ್ತಿದೆ. ಆದರೆ ಅಧಿಕಾರದಲ್ಲಿರುವ ಬಿಜೆಪಿಯ ಈ ಕ್ರಮವನ್ನು ಸೈದ್ಧಾಂತಿಕವಾಗಿ ಕೆಲವರು ಒಪ್ಪಲು ತಯಾರಿಲ್ಲ. ದಶಕಗಳಿಂದ ಕಾಂಗ್ರೆಸ್ ಹಾಗೂ ಕೆಲವು ಎಡಪಂಥೀಯ ಚಿಂತಕರು, ವಿಶ್ಲೇಷಕರು ಬಿಜೆಪಿಯನ್ನು ಸೈದ್ಧಾಂತಿಕ ಅಸಹಿಷ್ಣುತೆಯ ಬಲಿಪಶುವನ್ನಾಗಿ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ" ಎಂದು ಎಡಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

"2002ರಿಂದ ಪ್ರಧಾನಿ ನರೇಂದ್ರ ಮೋದಿ ಸೈದ್ಧಾಂತಿಕ ಅಸಹಿಷ್ಣುತೆಯಲ್ಲಿ ಅತ್ಯಂತ ಹೀನಾಯವಾಗಿ ಬಲಿಪಶುವಾದ ವ್ಯಕ್ತಿಯಾಗಿದ್ದು, ಮೊದಲು ಸಂಸತ್ ಕಲಾಪವನ್ನು ಅಡ್ಡಿಗೊಳಿಸುವ ಮೂಲಕ  ದೇಶದಲ್ಲಿ ಯಾವುದೇ ಸುಧಾರಣೆ ಆಗದಂತೆ ಮಾಡಿ ದೇಶದ ಪ್ರಗತಿಗೆ ಅಡ್ಡಿಪಡಿಸಿದರು. ಮತ್ತೊಂದೆಡೆ ಭಾರತದಲ್ಲಿ ಸಾಮಾಜಿಕ, ಧರ್ಮೀಯ ಸಂಘರ್ಷ ಹೆಚ್ಚಿದ್ದು, ಅಸಹಿಷ್ಣುತಾ   ಸಮಾಜವಾಗಿದೆ ಎಂದು ಬಿಂಬಿಸುವುದೇ ಬುದ್ಧಿಜೀವಿಗಳ ಗುರಿಯಾದಂತಿದೆ ಎಂದು ಜೇಟ್ಲಿ ಕಿಡಿಕಾರಿದ್ದಾರೆ.

ಇನ್ನು ದಾದ್ರಿ ಪ್ರಕರಣವನ್ನು ಉದ್ದೇಶಿಸಿದ ಅರುಣ್ ಜೇಟ್ಲಿ ಗೋಮಾಂಸ ಭಕ್ಷಣೆ ಹೊರಿಸಿ ಆತನನ್ನು ಕೊಂದ ಪ್ರಕರಣ ನಿಜಕ್ಕೂ ದುರದೃಷ್ಟಕರ ಮತ್ತು ಖಂಡನೀಯ. ತಪ್ಪಿತಸ್ಥರು ಯಾರೇ ಆದರು  ಅವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಇಂತಹ ವಿಕೃತಿಗಳ ಪರವಾಗಿ ಎಂದಿಗೂ ಎನ್ ಡಿಎ ಸರ್ಕಾರ ನಿಲ್ಲುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಗತಿಪರ ಮತ್ತು ಸಹಿಷ್ಣುತಾ ಸಮಾಜ  ಪರವಾದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರಚುರಪಡಿಸಲು ಪ್ರಯತ್ನಿಸುತ್ತಿದ್ದಾರೆ. ಭಾರತ ದೇಶ ಅಸಹಿಷ್ಣುತೆಯನ್ನು ಮೊದಲಿನಿಂದಲೂ ತಿರಸ್ಕರಿಸುತ್ತಾ  ಬಂದಿದ್ದು, ಯಾವುದೇ ಪ್ರಚೋದನೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಸ್ತುತ ಸರ್ಕಾರದ ಮತ್ತು ಭಾರತ ದೇಶದ ಹಿತಚಿಂತಕರು ಇಂತಹ ಭಾರತದ ದೇಶದ ಅಭಿವೃದ್ಧಿ ಬೇಡವಾದ ಅಥವಾ  ಅದನ್ನು ತಡೆಯಲು ಯತ್ನಿಸುತ್ತಿರುವ ದುಷ್ಟಶಕ್ತಿಗಳ ಪ್ರಾಯೋಜಿತ ಅಸಹಿಷ್ಣುತಾ ಪ್ರಚಾರ ಅಥವಾ ಪ್ರಚೋದನೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

'The Ease of Doing Business' ಶೀರ್ಷಿಕೆ ಅಡಿಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ದೇಶದ ಪ್ರಗತಿ, ಕೇಂದ್ರ ಸರ್ಕಾರ ಕೈಗೊಂಡ ಯೋಜನೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ತಮ್ಮ  ಬ್ಲಾಗ್ ನಲ್ಲಿ ವಿವರವಾಗಿ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!