ನವದೆಹಲಿ: `ಸಮಾನ ಶ್ರೇಣಿ ಸಮಾನ ಪಿಂಚಣಿ' ಯೋಜನೆಯಡಿ ಮೂರು ವರ್ಷಗಳಿಗೊಮ್ಮೆ ಪಿಂಚಣಿ ಪರಿಷ್ಕರಿಸುವುದಕ್ಕೆ ಮಾಜಿ ಸೈನಿಕರು ಒಪ್ಪಿಕೊಳ್ಳಬೇಕು ಎಂದು
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.
19 ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ನಿತ್ರಾಣರಾಗಿರುವ ಹವಲ್ದಾರ್ ಮೇಜರ್ ಸಿಂಗ್ ತಕ್ಷಣವೇ ಉಪವಾಸ ಕೈಬಿಡಬೇಕು ಎಂದು ಪ್ರಾರ್ಥಿಸಿದ್ದಾರೆ. ಜಂತರ್ ಮಂತರ್ ನಲ್ಲಿ ಮಾಜಿ ಸೈನಿಕರು ಅಮರಣಾಂತ ಉಪವಾಸ ಸತ್ಯಗ್ರಹ ನಡೆಸುತ್ತಿರುವುದರಿಂದ ವ್ಯಾಕುಲಗೊಂಡಿದ್ದೇನೆ. ಸರ್ಕಾರವು ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದೆ. ಆದ್ದರಿಂದ ಮಾಜಿ ಸೈನಿಕರು ಮುಖ್ಯವಾಗಿ ಹವಾಲ್ದಾರ್ ಮೇಜರ್ ಸಿಂಗ್ ಉಪವಾಸ ಕೈ ಬಿಡಬೇಕು ಎಂದು ಕೋರಿದ್ದಾರೆ.
ಸಮಾನ ಶ್ರೇಣಿ ಸಮಾನ ಪಿಂಚಣಿ ವ್ಯಾಖ್ಯಾನದ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಪ್ರಸ್ತಾಪಿಸಲಿರುವ ಅವರು, ನನ್ನ ದೃಷ್ಟಿಯಲ್ಲಿ ಸಮಾನ ಶ್ರೇಣಿ ಸಮಾನ ಪಿಂಚಣಿ ಎಂದರೆ ಪ್ರತಿ ವರ್ಷ ಪಿಂಚಣಿ ಪರಿಷ್ಕರಿಸುವುದಲ್ಲ. ಪ್ರತಿ ವರ್ಷ ಪಿಂಚಣಿ ಪರಿಷ್ಕರಿಸುವುದಲ್ಲ. ಪ್ರತಿವರ್ಷ ಪಿಂಚಣಿ ಪರಿಷ್ಕರಿಸಬೇಕೆಂಬುದು ಕಾರ್ಯ ಸಾಧುವೂ ಅಲ್ಲ. ಪ್ರಯೋಗಿಕವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಂಚಣಿ ಪರಿಷ್ಕರಿಸುವುದು ಈ ಯೋಜನೆಯ ಪ್ರಮುಖ ಅಂಗ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಮಾಡಿ ಸೈನಿಕರು, ಮೂರು ವರ್ಷಗಳಿಗೊಮ್ಮೆ ಪಿಂಚಣಿ ಪರಿಷ್ಕರಣೆ ಪ್ರಕ್ರಿಯೆ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.