ಸಭೆಯಲ್ಲಿ ಕ್ಯಾಂಡಿಕ್ರಶ್ ಆಡುತ್ತಿರುವ ಮಹಿಳಾ ಅಧಿಕಾರಿ 
ದೇಶ

ಸಮಸ್ಯೆ ಆಲಿಸಿ ಅಂದ್ರೆ ಕ್ಯಾಂಡಿಕ್ರಶ್ ಆಡ್ತಾ ಇದ್ರು ಈ ಮಹಿಳಾ ಅಧಿಕಾರಿ

ರೈತರ ಸಮಸ್ಯೆಗಳನ್ನು ಚರ್ಚಿಸಲೆಂದು ಕರೆದಿದ್ದ ಸರ್ಕಾರಿ ಸಭೆಯೊಂದರಲ್ಲಿ ಗಂಭೀರ ರ್ಚೆ ನಡೆಯುತ್ತಿರುವಾಗ ರೆವಿನ್ಯೂ ಇಲಾಖೆಯ...

ಚೆನ್ನೈ: ರೈತರ ಸಮಸ್ಯೆಗಳನ್ನು ಚರ್ಚಿಸಲೆಂದು ಕರೆದಿದ್ದ ಸರ್ಕಾರಿ ಸಭೆಯೊಂದರಲ್ಲಿ ಗಂಭೀರ ರ್ಚೆ ನಡೆಯುತ್ತಿರುವಾಗ ರೆವಿನ್ಯೂ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಸೆಲ್ ಫೋನ್‍ನಲ್ಲಿ ಕ್ಯಾಂಡಿ ಕ್ರಶ್ ಸಗಾ ಆಡುವುದರಲ್ಲಿ ಮಗ್ನರಾಗಿದ್ದರು.

ಚೆನ್ನೈನ ಧರ್ಮಪುರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕವಿತಾ ಎಂಬ ಈ ಅಧಿಕಾರಿ ಆಟವಾಡುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ. ಜಿಲ್ಲಾಧಿಕಾರಿ ಕೆ ವಿವೇಕಾನಂದನ್ ಪಕ್ಕದಲ್ಲಿಕೂತಿದ್ದ ಈಕೆ, 12ಕ್ಕೂ ಹೆಚ್ಚು ರೈತರು ಗಂಭೀರವಾಗಿ ತಮ್ಮ ಸಮಸ್ಯೆ ವಿವರಿಸುತ್ತಿದ್ದರೆ, ಟೇಬಲ್ ಮರೆ ಯಲ್ಲಿ ಮೊಬೈಲಲ್ಲಿ ಗೇಮ್ ಆಡುತ್ತಿದ್ದರು.

ಪೂರ್ತಿ ಆಟ ಆಡಿಯೇ ಗೇಮ್ ಕ್ಲೋಸ್ ಮಾಡಿದರೆಂದು ಕ್ಯಾಮೆರಾದಲ್ಲಿ ದಾಖಲಾಗಿದೆ. ವೈರಲ್ ಆಗಿರುವ ಕವಿತಾ ಫೋಟೋ ನೋಡಿ ಸ್ಥಳೀಯ ನಾಯಕರು ಮತ್ತು ಜನತೆ ಆಕ್ರೋಶಗೊಂಡು ಅಧಿಕಾರಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಕವಿತಾ ಅವರಿಂದ ವಿವರಣೆ ಕೇಳಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!