ಹೈದರಾಬಾದ್ : ಊರಿಗೂರೇ ಬಂದ್ ಆಚರಿಸುತ್ತಿದ್ದರೂ ದೇವಾಲಯಗಳು ಮಾತ್ರ ಎಂದಿನಂತೆ ಪೂಜಾವಿಧಿವಿಧಾನಗಳಲ್ಲಿ ತೊಡಗಿಕೊಂಡೇ ಇರುತ್ತವೆ. ಆದರೆ ಈಗ ದೇವಸ್ಥಾನದ ಅರ್ಚಕರು, ಸಿಬ್ಬಂದಿ ಮುಷ್ಕರ ನಡೆಸುತ್ತಿರುವ ಬಗ್ಗೆ ಎನ್‍ಡಿಟಿವಿ ಬುಧವಾರ ವರದಿ ಮಾಡಿದೆ.
ತೆಲಂಗಾಣದಲ್ಲಿ ನೂರಾರು ಅರ್ಚಕರು 8 ದಿನಗಳ ಮುಷ್ಕರ ಹೂಡಿ ದೇವಸ್ಥಾನದ ಎಲ್ಲ ಧಾರ್ಮಿಕ ಚಟುವಟಿಕೆಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇದರಿಂದಾಗಿ ಹಲವು ದೇಗುಲಗಳಲ್ಲಿ ಘಂಟೆ ಜಾಗಟೆಗಳ ಸದ್ದು, ಮಂತ್ರ ಘೋಷ, ಧೂಪ ದೀಪಗಳು ಇರುವುದಿಲ್ಲ.
ಸರ್ಕಾರದ ದತ್ತಿ ವಿಭಾಗದ ನಿಯಂತ್ರಣದಲ್ಲಿ ಬರುವ ಸುಮಾರು 670 ಚಿಕ್ಕ ದೇವಸ್ಥಾನಗಳ ಅರ್ಚಕರು ಸರ್ಕಾರಿ ನೌಕರರಿಗೆ ಸರಿಸಮಾನ ವಾದ ವೇತನದ ಬೇಡಿಕೆ ಇರಿಸಿದ್ದಾರೆ.