ನವದೆಹಲಿ: ಕ್ಷಿಪಣಿ ಮಾನವ ದಿವಂಗತ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಉಪಗ್ರಹ ಪರೀಕ್ಷೆ ನಡೆಸುವ ಒಡಿಶಾ ಕರಾವಳಿ ತೀರದಲ್ಲಿರುವ ಪುಟ್ಟ ವೀಲರ್ ದ್ವೀಪಕ್ಕೆ ‘ಎ.ಪಿ.ಜೆ ಅಬ್ದುಲ್ ಕಲಾಂ ದ್ವೀಪ’ ಎಂದು ಹೆಸರಿಡಲಾಗಿದೆ.
ವೀಲರ್ ದ್ವೀಪಕ್ಕೆ ಅಬ್ದುಲ್ ಕಲಾಂ ಹೆಸರಿಡಬೇಕು ಎಂದು ಒಡಿಶಾ ಸರ್ಕಾರಿ ಈ ಹಿಂದೆ ತೀರ್ಮಾನಿಸಿತ್ತು. ಅದರಂತೆ ಇಂದು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ.
ಈ ದ್ವೀಪದಲ್ಲಿ ಕಲಾಂ ಅವರು ಹಲವು ಕ್ಷಿಪಣಿಗಳ ಪರೀಕ್ಷೆ ನಡೆಸಿದ್ದರು. ಇಲ್ಲಿನ ಪ್ರಶಾಂತ ವಾತಾವರಣ ಕಲಾಂ ಅವರಿಗೆ ಪದ್ಯ ಬರೆಯಲು ಸ್ಫೂರ್ತಿಯಾಗಿತ್ತು. ಈ ಪದ್ಯಗಳನ್ನು ಕಲಾಂ ಅವರ ‘ಮೈ ಜರ್ನಿ’ ಪುಸ್ತಕದಲ್ಲಿ ನೋಡಬಹುದು.
ಭಾರತದ ಮಹತ್ವಾಕಾಂಕ್ಷೆಯ ‘ಪೃಥ್ವಿ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು ಇದೇ ದ್ವೀಪದಲ್ಲಿ ಎಂಬುದು ವಿಶೇಷ. ಇದು ಕಲಾಂ ಅವರ ಮೆಚ್ಚಿನ ದ್ವೀಪವಾದ್ದರಿಂದ ಇದಕ್ಕೆ ಕಲಾಂ ದ್ವೀಪ ಎಂದು ಹೆಸರಿಡಲಾಗಿದೆ.
ಪ್ರಸ್ತುತ ಈ ದ್ವೀಪವನ್ನು ಬ್ರಿಟಿಷ್ ಕಮಾಂಡೆಂಟ್ ‘ವೀಲರ್’ ಅವರ ಹೆಸರಿನಿಂದ ಕರೆಯಲಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics