ದತ್ತಾತ್ರೇಯ ಹೊಸಬಾಳೆ 
ದೇಶ

ಕೇಂದ್ರ ಸರ್ಕಾರದ ಗುರಿ, ನಡೆ ಸರಿಯಾಗಿದೆ, ಸಂಘದಿಂದ ಯಾವುದೇ ಅಜೆಂಡಾ ನೀಡಿಲ್ಲ: ಆರ್‌ಎಸ್‌ಎಸ್

ಕೇಂದ್ರ ಸರ್ಕಾರದ ಗುರಿ ಹಾಗೂ ನಡೆ ಎರಡೂ ಸರಿಯಾಗಿದೆ ಹೀಗಾಗಿ ಸರ್ಕಾರಕ್ಕೆ ಸಂಘದಿಂದ ಯಾವುದೇ ಅಜೆಂಡಾ ನೀಡಿಲ್ಲ. ಅಲ್ಲದೆ ಉತ್ತರ ಪ್ರದೇಶದ...

ನವದೆಹಲಿ: ಕೇಂದ್ರ ಸರ್ಕಾರದ ಗುರಿ ಹಾಗೂ ನಡೆ ಎರಡೂ ಸರಿಯಾಗಿದೆ ಹೀಗಾಗಿ ಸರ್ಕಾರಕ್ಕೆ ಸಂಘದಿಂದ ಯಾವುದೇ ಅಜೆಂಡಾ ನೀಡಿಲ್ಲ. ಅಲ್ಲದೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಬದ್ಧವಾಗಿದೆ ಎಂದು ಆರ್‌ಎಸ್‌ಎಸ್ ಹೇಳಿದೆ. 
ನವದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್-ಬಿಜೆಪಿ ವಾರ್ಷಿಕ ಸಮಸ್ವಯ ಸಭೆಯ ಕೊನೆಯ ದಿನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಹೊರತು ಯಾವುದೇ ನಿರ್ಧಾರ ಕೈಗೊಳ್ಳುವ ಸಭೆ ಇದಾಗಿರಲಿಲ್ಲ ಎಂದು ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. 
ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರದ ಗುರಿ ಹಾಗೂ ನಡೆ ಎರಡೂ ಸರಿಯಾಗಿದೆ ಹೀಗಾಗಿ ಸರ್ಕಾರಕ್ಕೆ ಸಂಘದಿಂದ ಯಾವುದೇ ಅಜೆಂಡಾ ನೀಡಿಲ್ಲ ಹಾಗೂ ಸಭೆಯಲ್ಲಿ ಸರ್ಕಾರದ ಕಾರ್ಯವೈಖರಿ ಕುರಿತು ವಿಶ್ಲೇಷಣೆ ಮಾಡಿಲ್ಲ ಎಂದು ನಾಯಕರು ತಿಳಿಸಿದ್ದಾರೆ. 
ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವ ಯಾವುದೇ ನೈತಿಕ ಅಧಿಕಾರ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಸ್ವತಃ ರಿಮೋಟ್ ಕಂಟ್ರೋಲ್ ಗೆ ಒಳಪಟ್ಟಿರುವ ಕಾಂಗ್ರೆಸ್ ಬೇರೆಯವರನ್ನು ಟೀಕಿಸುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT