ನವದೆಹಲಿ: ಕೇಂದ್ರ ಸರ್ಕಾರ `ಗ್ರೀನ್ ಹೌಸ್ ಫಂಡ್' ಸ್ಥಾಪಿಸುವುದಾಗಿ ಪ್ರಕಟಿಸಿದ್ದು 96,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಇದರ ವ್ಯಾಪ್ತಿಗೆ ತರಲಿದೆ. ರಸ್ತೆ ಅಭಿವೃದ್ಧಿಯ ಶೇ.1ರಷ್ಟು ಹಣವನ್ನು ಈ ಯೋಜನೆಗಾಗಿ ಮೀಸಲಿಡಲಾಗುವುದು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ `ಗ್ರೀನ್ ಹೈವೇಸ್(ಪ್ಲಾಂಟೇಷನ್ ಅಂಡ್ ಮೈಂಟೆನೆನ್ಸ್) ಪಾಲಿಸಿ-2015'ರನ್ನು ರಚಿಸುತ್ತಿದೆ. ಈ ಯೋಜನೆಯಡಿ ಸಮುದಾಯ, ಎನ್‍ಜಿಒ ಸೇರಿದಂತೆ ಹಲವರನ್ನು ತೊಡಗಿಸಿಕೊಳ್ಳಲಾಗುವುದು.
ಹೆದ್ದಾರಿಗಳನ್ನು ನಿರ್ಮಾಣ ಮಾಡುವಾಗ ಸಿವಿಲ್ ಕಾಮಗಾರಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಹೆಚ್ಚುವರಿ ಕೆಲಸವನ್ನು ಸೇರಿಸಿ ಒಟ್ಟಾರೆ ಅಂದಾಜು ವೆಚ್ಚ ರೂಪಿಸಲಾಗುವುದು.