ಮ್ಯಾಗಿ ನೂಡಲ್ಸ್ ನಲ್ಲಿ ಹಾನಿಕಾರ ಸೀಸದ ಅಂಶ ಇರುವ ಬಗ್ಗೆ ದೇಶಾದ್ಯಂತ ಆಗುತ್ತಿರುವ ಚರ್ಚೆಗಳ ನಡುವೆಯೇ ಯೋಗಗುರು ಬಾಬಾ ರಾಮ್ ದೇವ್ ಸ್ವದೇಶಿ ನ್ಯೂಡಲ್ಸ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಗೋಧಿಯಿಂದ ತಯಾರಿಸಿದ ಪತಂಜಲಿ "ಆಟಾ ನೂಡಲ್ಸ್'ಅನ್ನು ಬಾಬಾ ರಾಮ್‌ದೇವ್ ಹರಿದ್ವಾರದಲ್ಲಿ ಬಿಡುಗಡೆ ಮಾಡಿದ್ದಾರೆ.
ಕೆಲ ದಿನಗಳಲ್ಲೇ ನ್ಯೂಡಲ್ಸ್ ಎಲ್ಲರ ಕೈ ಸೇರಲಿದ್ದೂ ನೂಡಲ್ಸ್ ತಯಾರಿಕೆಗೆ ಮೈದಾ ಹಿಟ್ಟನ್ನು ಬಳಸಿಲ್ಲ. ಸಂಪೂರ್ಣ ಸ್ವದೇಶಿ ವಸ್ತುಗಳನ್ನೇ ಬಳಸಿ ತಯಾರು ಮಾಡಲಾಗಿದ್ದು ಆರೋಗ್ಯ ವರ್ಧಕವಾಗಿದೆ. ಮಕ್ಕಳ ಮೇಲೆಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಆಹಾರ ಭದ್ರತಾ ಮಂಡಳಿಯಿಂದಲೂ ರಾಮ್ ದೇವ್ ಪರವಾನಗಿ ಪಡೆದುಕೊಂಡಿದ್ದಾರೆ.
ಈಗಾಗಲೇ ಪತಂಜಲಿಯ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದು ಜನರ ಮೆಚ್ಚುಗೆ ಗಳಿಸಿವೆ. ಸಾಮಾಜಿಕ ಜಾಲತಾಣಗಳನ್ನು ಪತಂಜಲಿ ನೂಡಲ್ಸ್ ಬಗ್ಗೆ ಚರ್ಚೆ ಆರಂಭವಾಗಿದೆ.