ಗಡಿಯಲ್ಲಿ ಪಹರೆ ಕಾಯುತ್ತಿರುವ ಯೋಧರು (ಸಂಗ್ರಹ ಚಿತ್ರ) 
ದೇಶ

ಗಡಿಯಲ್ಲಿ ಬಿಎಸ್ ಎಫ್ ಯೋಧರಿಂದ 20 ಕೋಟಿ ಮೌಲ್ಯದ ಡ್ರಗ್ಸ್ ವಶ

ಪಾಕಿಸ್ತಾನದಿಂದ ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಡ್ರಗ್ಸ್ ಅನ್ನು ಭಾರತೀಯ ಗಡಿ ಭಧ್ರತಾ ಪಡೆಗಳು ಸೋಮವಾರ ವಶಪಡಿಸಿಕೊಂಡಿವೆ.

ಚಂಡೀಘಡ: ಪಾಕಿಸ್ತಾನದಿಂದ ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಡ್ರಗ್ಸ್ ಅನ್ನು ಭಾರತೀಯ ಗಡಿ ಭಧ್ರತಾ ಪಡೆಗಳು ಸೋಮವಾರ ವಶಪಡಿಸಿಕೊಂಡಿವೆ.

ಪಂಜಾಬ್ ಪ್ರಾಂತ್ಯದ ಫಿರೋಜ್ ಪುರ ಸೆಕ್ಟರ್ ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದ ಹಿನ್ನಲೆಯಲ್ಲಿ ಕೂಡಲೇ ಎಚ್ಚೆತ್ತ ಬಿಎಸ್ ಎಫ್ ಯೋಧರು, ಕಾರ್ಯಾಚರಣೆ ನಡೆಸಿ ಸುಮಾರು 20 ಕೋಟಿ ರು. ಮೌಲ್ಯದ 4 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಗಡಿಯಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ನುಸುಳುಕೋರರು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಪರಸ್ಪರ ವಸ್ತುಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ ಸ್ಮಗ್ಲರ್ ಗಳು ಭಾರತದಲ್ಲಿರುವ ತಮ್ಮ ಏಜೆಂಟರುಗಳಿಗೆ ತಲುಪಿಸುವಂತೆ ಹೇಳಿ ಗಡಿಯಲ್ಲಿ ಹಾಕಿರುವ ಮುಳ್ಳಿನ ತಂತಿಗಳನ್ನು ಸಡಿಲಗೊಳಿಸಿ ಅದರ ಮೂಲಕ ಅಕ್ರಮ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಯೋಧರ ಕಣ್ತಪ್ಪಿಸಿ ಹಲವು ಬಾರಿ ಬ್ಯಾಗುಗಳನ್ನು ಮತ್ತು ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನು ಎಸೆದು ಹೋಗಿದ್ದಾರೆ. ಈ ವೇಳೆ ಗಸ್ತು ತಿರುಗುತ್ತಿದ್ದ ಯೋಧರು ಗುಂಡು ಹಾರಿಸಿದ್ದಾರಾದರೂ, ಸ್ಮಗ್ಲರ್ ಗಳು ತಪ್ಪಿಸಿಕೊಂಡು ಹೋಗಿದ್ದಾರೆ. ಹೀಗಾಗಿ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಸೇನೆಯ ಮೂಲಗಳ ತಿಳಿಸಿವೆ.

ಒಟ್ಟಾರೆ ಅತ್ತ ಪಾಕಿಸ್ತಾನಿ ಸೈನಿಕರು ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದರೆ, ಇತ್ತ ಸ್ಮಗ್ಲರ್ ಗಳು ಅಕ್ರಮವಾಗಿ ಹೆರಾಯಿನ್ ನಂತಹ ಅಕ್ರಮ ವಸ್ತುಗಳನ್ನು ಸಾಗಾಟ ಮಾಡುವ ಮೂಲಕ ಭಾರತೀಯ ಯೋಧರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!