ನವದೆಹಲಿ: ಉದ್ಯೋಗ ಹರಸಿಕೊಂಡು ಹೋದ 17ರ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ 11 ಮಂದಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಜೈಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಗಸ್ಟ್ 30 ರಂದು ದೆಹಲಿ ಮೂಲದ ಅಪ್ರಾಪ್ತ ಬಾಲಕಿಗೆ ದಂಪತಿಗಳು ಕೆಲಸ ಕೊಡಿಸುವುದಾಗಿ ಹೇಳಿ ಜೈಪುರಕ್ಕೆ ಕರೆದೊಯ್ದಿದ್ದಾರೆ. ನಂತರ ಆಕೆಯನ್ನು ಹೋಟೆಲ್ ನಲ್ಲಿ ಉಳಿಯುವಂತೆ ತಿಳಿಸಿದ್ದಾರೆ. ನಂತರ ಹೋಟೆಲ್ ನ ರೂಮಿಗೆ ಇದ್ದಕ್ಕಿದ್ದಂತೆ ನುಗ್ಗಿದ 11 ಮಂದಿಯ ಗುಂಪೊಂದು ಆಕೆಯ ಮೇಲೆ ನಿರಂತರವಾಗಿ 24 ಘಂಟೆಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಘಟನೆಯ ವಿವರ ತಿಳಿಸಿರುವ ಬಾಲಕಿ, ಉದ್ಯೋಗ ಕೊಡಿಸುತ್ತೇವೆಂದು ಹೇಳಿ ದಂಪತಿಯೊಬ್ಬರು ಒಬ್ಬಳನ್ನೇ ಜೈಪುರಕ್ಕೆ ಕರೆದುಕೊಂಡು ಹೋದರು. ನಂತರ ಹೋಟೆಲ್ ರೂಮ್ ನಲ್ಲಿ ಇರಿಸಿ ಹೊರಟು ಹೋದರು. ನಂತರ ಹೋಟೆಲ್ ನ ಸಿಬ್ಬಂದಿ ಸೇರಿದಂತೆ 11 ಮಂದಿಯ ಗುಂಪೊಂದು ನಿರಂತರವಾಗಿ ಅತ್ಯಾಚಾರ ಮಾಡಿದರು. ನಂತರ ಹೇಗೋ ಕಣ್ಣು ತಪ್ಪಿಸಿ ಸ್ಥಳದಿಂದ ಓಡಿಬಂದೆ ಎಂದು ಹೇಳಿಕೊಂಡಿದ್ದಾಳೆ.
ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು, ಈಗಾಗಲೇ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಮತ್ತಷ್ಟು ಮಾಹಿತಿಗಾಗಿ ನಿರೀಕ್ಷಿಸಲಾಗಿದೆ...