ಸಾಂದರ್ಭಿಕ ಚಿತ್ರ 
ದೇಶ

ಮುಂಬೈ: ಉಪನಗರದಲ್ಲಿ 8 ದಿನಗಳ ಕಾಲ ಮಾಂಸ ಮಾರಾಟ ನಿಷೇಧ

ಮಹಾರಾಷ್ಟ್ರದ ಉತ್ತರದ ಉಪ ನಗರಗಳಾದ ಮಿರಾರೋಡ್ ಹಾಗೂ ಭಾಯಿಂದರ್‌ನಲ್ಲಿ 8 ದಿನಗಳ ಕಾಲ ಮಾಂಸ ಮಾರಾಟವನ್ನು...

ಮುಂಬೈ: ಮಹಾರಾಷ್ಟ್ರದ ಉತ್ತರದ ಉಪ ನಗರಗಳಾದ ಮಿರಾರೋಡ್ ಹಾಗೂ ಭಾಯಿಂದರ್‌ನಲ್ಲಿ 8 ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಬಿಜೆಪಿ ನೇತೃತ್ವದ ಮಿರಾ-ಭಾಯಿಂದರ್ ಮಹಾ ನಗರದ ಪಾಲಿಕೆ(ಎಂಬಿಎಂಸಿ) ಮಾಂಸ ಮಾರಾಟಕ್ಕೆ 8 ದಿನಗಳ ಕಾಲ ನಿಷೇದಾಜ್ಞೆ ಜಾರಿಗೆ ತಂದಿದೆ. ಇಲ್ಲಿನ ಜೈನ ನಿವಾಸಿಗಳು ಈ ತಿಂಗಳು ಜೈನರ ಉಪವಾಸ ವ್ರತ‘ಪರ್ಯಾಫಣದ’ಮಾಡುತ್ತಾರೆ.

ಈ ಹಿನ್ನಲೆಯಲ್ಲಿ, ಎಂಬಿಎಂಸಿ ಅಧಿಕಾರ ಹಿಡಿದಿರುವ ಬಿಜೆಪಿ, ಸೆ.10ರಿಂದ 28ರ ನಡುವಿನ ಉಪವಾಸದ ಅವಧಿಯಲ್ಲಿ ಮಾಂಸ ಮಾರಾಟ ಹಾಗೂ ಜಾನುವಾರು ವಧೆ ನಿಷೇಧಿಸುವ ಹಕ್ಕನ್ನು ಮತದಾನದಲ್ಲಿ ಗೆದ್ದಿದೆ.

ಜೈನ ಶ್ವೇತಾಂಬರರು ಸೆ.11ರಿಂದ 18 ಹಾಗೂ ದಿಗಂಬರರು ಸೆ.18ರಿಂದ 28 ರವರೆಗೆ ಪರ್ಯಾಫಣವನ್ನು (ಉಪವಾಸ) ಆಚರಿಸುತ್ತಾರೆ. 2011 ರ ಜನಗಣತಿಯಂತೆ ಈ ಪ್ರದೇಶದ ಜನಸಂಖ್ಯೆ 8.5 ಲಕ್ಷವಿದ್ದು, ಅವರಲ್ಲಿ ಸುಮಾರು 1.25 ಲಕ್ಷ ಜೈನರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT