ಬೆಂಗಳೂರು: ಡಿಜಿಟಲ್ ಇಂಡಿಯಾ ಭಾಗವಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಹಾಗೂ ಭಾರತೀಯ ವಾಯುಸೇನೆ (ಐಎಎಫ್) ಹೊರತಂದಿರುವ ಇ ಪೋರ್ಟಲ್‍ಗೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಭಾನುವಾರ ಚಾಲನೆ ನೀಡಿದರು.
ಎಚ್‍ಎಎಲ್ ಕಾರ್ಪೊರೇಟ್ ಕಚೇರಿಯಲ್ಲಿ ಐಎಎಫ್ಎಚ್‍ಎಎಲ್ ನಡುವೆ ಆಂತರಿಕವಾಗಿ ಬಳಕೆಯಾಗುವ ಇ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿದ ಪರ್ರಿಕರ್, ಇ ಪೋರ್ಟಲ್‍ನಿಂದ ಎರಡು ಸಂಸ್ಥೆಗಳ ನಡುವಿನ ಉತ್ತಮ ಸಮನ್ವಯದಿಂದ ಸಾಮರ್ಥ್ಯ ಹೆಚ್ಚಳವಾಗಲಿದೆ. ಪೋರ್ಟಲ್ ನಲ್ಲಿ ಗ್ರಾಹಕರು, ಎರಡು ಸಂಸ್ಥೆಗಳಿಗೆ ಸೇರಿದ ಉತ್ಪನ್ನಗಳ ಸಂಪೂರ್ಣ ಮಾಹಿತಿ ಲಭ್ಯವಾಗುವುದರಿಂದ ಪದೇ ಪದೇ ಎರಡು ಸಂಸ್ಥೆಗಳ ಅಧಿಕಾರಿಗಳು ಪ್ರತ್ಯೇಕ ಸಭೆ ಕರೆಯುವುದು ತಪ್ಪಲಿದ್ದು ಸಮಯ ಉಳಿತಾಯವಾಗಲಿದೆ ಎಂದರು.