ಇಸ್ಲಾಮಾಬಾದ್: ಪಾಕಿಸ್ತಾನ ಕನಿಷ್ಠ ಅಣ್ವಸ್ತ್ರ ನಿರೋಧ ಕಾಯ್ದುಕೊಳ್ಳಲಿದೆ, ಅಣ್ವಸ್ತ್ರಗಳನ್ನು ಯಾರ ವಿರುದ್ಧವೂ ಪ್ರಯೋಗಿಸುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ ಸಭೆಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶಸ್ತ್ರಾಸ್ತ್ರ ಪೈಪೋಟಿಯನ್ನು ತಡೆಯುವುದಕ್ಕೆ ಪಾಕಿಸ್ತಾನ ಬದ್ಧವಾಗಿದೆ. ಪಾಕಿಸ್ತಾನ ಕನಿಷ್ಠ ಅಣ್ವಸ್ತ್ರ ನಿರೋಧ ಕಾಯ್ದುಕೊಳ್ಳಲಿದೆಯೇ ಹೊರತು ಅದು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಪಾಕ್ ನ ರೇಡಿಯೋ ವರದಿ ಮಾಡಿದೆ.
"ಪಾಕಿಸ್ತಾನ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ ಮತ್ತು ಕಾರ್ಯತಂತ್ರದ ಸ್ಥಿರತೆಯನ್ನು ಬಯಸುತ್ತದೆ, ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳುವುದರ ಈ ಗುರಿ ಸಾಧಿಸಬಹುದು ಎಂದು ಶರೀಫ್ ಹೇಳಿದ್ದಾರೆ. ಕದನ ವಿರಾಮ ಉಲ್ಲಂಘನೆ, ಭಯೋತ್ಪಾದನೆ ವಿಷಯದಲ್ಲಿ ಭಾರತದ ಆರೋಪವನ್ನು ತಳ್ಳಿಹಾಕಿದ್ದು ಅಲ್ಲದೇ ಗಡಿ ವಿದವಾದ ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಪಾಕಿಸ್ತಾನದ ಸೇನಾ ಅಧಿಕಾರಿಗಳು ತಾನೂ ಅಣ್ವಸ್ತ್ರ ರಾಷ್ಟ್ರವಾಗಿದ್ದು ಭಾರತದ ಮೇಲೆ ಪ್ರಯೋಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಪಾಕಿಸ್ತಾನ ಪ್ರಧಾನಿ ನಾವಾಜ್ ಶರೀಫ್ ಮಾತ್ರ ಪಾಕಿಸ್ತಾನ ಕನಿಷ್ಠ ಅಣ್ವಸ್ತ್ರ ನಿರೋಧ ಕಾಯ್ದುಕೊಳ್ಳಲಿದ್ದು ಯಾರ ವಿರುದ್ಧವೂ ಪ್ರಯೋಗಿಸುವುದಿಲ್ಲ ಎಂದು ಹೇಳಿದ್ದಾರೆ.