ದೇಶ

ಒಳ್ಳೆಯ ದಿನಗಳೆಲ್ಲಿ?: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

Srinivas Rao BV

ಭುವನೇಶ್ವರ್: ಅಭಿವೃದ್ಧಿಗೆ ಕಾಂಗ್ರೆಸ್ ತಡೆಯೊಡ್ಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರೆ, ಇತ್ತ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಅಚ್ಛೆ ದಿನ್(ಒಳ್ಳೆಯ ದಿನಗಳು) ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ರೈತವಿರೋಧಿ ನಿಲುವು ಹೊಂದಿದೆ. ಒಳ್ಳೆಯ ದಿನಗಳನ್ನು ನೀಡುವುದಾಗಿ ತಿಳಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಒಳ್ಳೆಯ ದಿನಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಮೋದಿ ಅವರ ಭರವಸೆಯಲ್ಲಿ ರೈತರು ಹಾಗೂ ಬಡಜನತೆ ವಿಶ್ವಾಸವಿಟ್ಟಿದ್ದರು. ಅಧಿಕಾರಕ್ಕೆ ಬಂದ ಎರಡನೇ ದಿನವೇ ಪ್ರಧಾನಿ ಮೋದಿ ವಿಶ್ವಾಸವನ್ನು ಹುಸಿಗೊಳಿಸಿದ್ದಾರೆ ಎಂದು ಒಡಿಶಾದ ರೈತ ಸಮಾವೇಶದಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರೈತರಿಗಾಗಿ ನಾನು ಮತ್ತು ನನ್ನ ಪಕ್ಷ ಹೋರಾಡುತ್ತೇವೆ, ರೈತರಿಗೆ ಅನುಕೂಲವಾಗುವಂತೆ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು.  ಶೇ.75 ರಷ್ಟು ಅನುಮತಿ ಪಡೆದ ಬಳಿಕವೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ತಯಾರಿಸಿದ್ದ ಮಸೂದೆಯಲ್ಲಿ ರೈತರ ಅನುಮತಿಯ ವಿಷಯವನ್ನು ತೆಗೆದುಹಾಕಿ ರೈತರ ಜಮೀನನ್ನು ಕಸಿದುಕೊಳ್ಳಲು ಯತ್ನಿಸಿತ್ತು ಎಂದು ಎನ್.ಡಿ.ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಕಾಂಗ್ರೆಸ್ ನ 44 ಸಂಸದರನ್ನು ಆಯ್ಕೆ ಮಾಡಿದ್ದರೂ, ಕಾಂಗ್ರೆಸ್ ಪಕ್ಷ ರೈತರಿಗಾಗಿ ಹೋರಾಟ ಮಾಡಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

SCROLL FOR NEXT