ಅಹಮದಾಬಾದ್: ಮುಂಬೈ ಹಾಗೂ ರಾಜಸ್ಥಾನದ ನಂತರ ಜೈನ ಧರ್ಮೀಯರ ಉಪವಾಸ ಆಚರಣೆ (ಪರ್ಯೂಷನ್) ಪ್ರಯುಕ್ತ ಮಾಂಸ ಮಾರಾಟದ ಮೇಲಿನ ನಿಷೇಧ ಇದೀಗ ಅಹಮದಾಬಾದ್ ಗೂ ವಿಸ್ತರಿಸಿದೆ.
ವರದಿಗಳ ಪ್ರಕಾರ, ಅಹಮದಾಬಾದ್ ಪೊಲೀಸ್ ಆಯುಕ್ತರು ಒಂದು ವಾರಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.
ಪರ್ಯೂಷನ್ ಪ್ರಯುಕ್ತ ಬಿಜೆಪಿ ನೇತೃತ್ವದ ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ಎರಡು ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಿ ಬುಧವಾರ ಆದೇಶ ಹೊರಡಿಸಿತ್ತು.
ಇದಕ್ಕು ಮುನ್ನ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಮುಂಬೈನಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟಕ್ಕೆ ನಿಷೇಧ ಹೇರಿದ್ದು, ಇದನ್ನು ಮಿತ್ರ ಪಕ್ಷ ಶಿವಸೇನೆ ಹಾಗೂ ಎಂಎನ್‌ಎಸ್ ತೀವ್ರವಾಗಿ ವಿರೋಧಿಸಿವೆ.
ನಿಷೇಧ ನಿರ್ಧಾರ ವಿರೋಧಿಸಿ ಶಿವಸೇನೆ ಹಾಗೂ ಎಂಎನ್ಎಸ್ ಕಾರ್ಯಕರ್ತರು ಮಾಂಸ ಮಾರಾಟ ಮಳಿಗೆಗಳನ್ನು ತೆರೆದು ಪ್ರತಿಭಟಿಸಿದರು. ಅಲ್ಲದೆ ರಸ್ತೆ ಬಳಿ ಇಂತು ಕೋರಿ ಮಾರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.