ದೇಶ

ಒಆರ್ ಒಪಿ: ನಾಳೆ ನಿವೃತ್ತ ಯೋಧರಿಂದ ಜಂತರ್ ಮಂತರ್ ನಲ್ಲಿ ರ್ಯಾಲಿ

Mainashree

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಜಾರಿಗೊಳಿಸಿರುವ ಸಮಾನ ಶ್ರೇಣಿ, ಸಮಾನ ಪಿಂಚಣಿಯನ್ನು (ಒಆರ್ ಒಪಿ)ಯನ್ನು ತಿರಸ್ಕರಿಸಿರುವ ನಿವೃತ್ತ ಯೋಧರು ದೆಹಲಿಯಲ್ಲಿ ನಾಳೆ 'ಸೈನಿಕ್ ಏಕ್ತಾ' ರ್ಯಾಲಿ ಕೈಗೊಳ್ಳಲಿದ್ದಾರೆ.

ಕೇಂದ್ರ ಸರ್ಕಾರ ಒಆರ್ ಒಪಿ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ. ಈ ಹಿನ್ನಲೆಯಲ್ಲಿ ಪ್ರಾಮಾಣಿಕ ಮತ್ತು ಸತ್ಯ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದು, ನಾಳೆ ಜಂತರ್ ಮಂತರ್ ನಲ್ಲಿ ರ್ಯಾಲಿ ಕೈಗೊಳ್ಳಲಾಗಿದೆ ಎಂದು ಭಾರತೀಯ ನಿವೃತ್ತ ಯೋಧರ ಚಳುವಳಿಯ ಅಧ್ಯಕ್ಷ ಸತ್ ಬಿರ್ ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಆರ್ ಒಪಿಯಲ್ಲಿ ಯಾವುದೇ ಹುರುಳಿಲ್ಲ. ನಿವೃತ್ತ ಯೋಧರಿಗೆ ಒದಗಿಸಬೇಕಾದ ಸಂಪೂರ್ಣ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮುಂದೆ ನಾವು 7 ಬೇಡಿಕೆಗಳನ್ನು ಇಟ್ಟಿದ್ದವು. ಆದರೆ, ಕೇಂದ್ರ ನಮ್ಮ ಏಳು ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕ್ಷಣ ನಮ್ಮ ಏಳು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸುತ್ತೇವೆ ಎಂದು ಕಾಗದದ ಮೇಲೆ ಬರೆದುಕೊಟ್ಟರೆ, ಪ್ರತಿಭಟನೆಯನ್ನು ಕೈಬಿಡಲಾಗುವುದು ಎಂದ ಅವರು, ಆರ್ಥಿಕ ಅವ್ಯವಸ್ಥೆ ಬಗ್ಗೆ ಕೇಳಿ ಬಂದಿರುವ ಆರೋಪ ಆಧಾರರಹಿತವಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ಎಲ್ಲಾ ದಾಖಲೆಗಳು ಮತ್ತು ರಸೀದಿಗಳು ನಮ್ಮಲ್ಲಿವೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT