ನವದೆಹಲಿ: ಗುರ್‍ಗಾಂವ್‍ನಲ್ಲಿ ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿಯಿಂದ ಅತ್ಯಾಚಾರಕ್ಕೊಳಗಾದ ಇಬ್ಬರು ನೇಪಾಳಿ ಮಹಿಳೆಯರಿಗೆ ಕೊಡಬಾರದ ಚಿತ್ರಹಿಂಸೆ ಕೊಡಲಾಗಿದೆ ಎಂದು ವೈದ್ಯಕೀಯ ವರದಿಗಳಿಂದ ತಿಳಿದುಬಂದಿದೆ.
ತಾಯಿ-ಮಗಳಿಬ್ಬರನ್ನೂ 2 ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಬ್ಬ ಮಹಿಳೆಗೆ ಎಷ್ಟೆಲ್ಲ ರೀತಿಯ ಲೈಂಗಿಕ ಹಿಂಸೆ ನೀಡಬಹುದೋ, ಅಷ್ಟೆಲ್ಲವನ್ನೂ ಇವರಿಗೆ ನೀಡಿರುವುದು ದೃಢಪಟ್ಟಿದೆ ಎಂದು ಗುರ್‍ಗಾಂವ್ ಸಿವಿಲ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ತಾಯಿಯ ತಲೆತೊಗಲಲ್ಲಿ ಜಜ್ಜಿದ ಗಾಯವಿದ್ದರೆ, 20 ವರ್ಷದ ಮಗಳ ಮಣಿಕಟ್ಟಿನಲ್ಲಿ ಚಾಕುವಿನ ಗಾಯವಿದೆ. ಇವರ ಜನನಾಂಗ, ಗುದದ್ವಾರದೊಳಕ್ಕೆ ಸೆಕ್ಸ್ ಟಾಯ್ ಗಳು ಸೇರಿದಂತೆ ಅನೇಕ ವಸ್ತುಗಳನ್ನು ಹಾಕಿರುವುದು ದೃಢಪಟ್ಟಿದೆ ಎಂದಿದ್ದಾರೆ.