ಸಾಂದರ್ಭಿಕ ಚಿತ್ರ 
ದೇಶ

ಡೆಂಗ್ಯೂ ನಿಂದ ಮಗ ಸಾವು: ನೊಂದ ಪೋಷಕರ ಆತ್ಮಹತ್ಯೆ

ಡೆಂಗ್ಯೂ ಜ್ವರದಿಂದ 7 ವರ್ಷದ ಮಗ ಸಾವನ್ನಪ್ಪಿದ್ದರಿಂದ ನೊಂದ ತಂದೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ....

ನವದೆಹಲಿ: ಡೆಂಗ್ಯೂ ಜ್ವರದಿಂದ 7 ವರ್ಷದ ಮಗ ಸಾವನ್ನಪ್ಪಿದ್ದರಿಂದ ನೊಂದ ತಂದೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.

ಒಡಿಸಾ ಮೂಲದ ಲಕ್ಷ್ಮಿ ಚಂದ್ರ ಮತ್ತು ಬಬಿತಾ ರೌಟ್ ಎಂಬುವರ ಪುತ್ರ ಅವಿನಾಶ್ ಶಂಕಿತ ಡೆಂಗ್ಯೂನಿಂದ ಸೆಪ್ಟಂಬರ್ 8ರಂದು ಮೃತ ಪಟ್ಟಿದ್ದಾನೆ. ಇದರಿಂದ ಮನನೊಂದ ದಂಪತಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾವು ಸಾಯುವ ಮುನ್ನ ಸೂಸೈಡ್ ನೋಟ್ ಬರೆದಿಟ್ಟು ತಮ್ಮ ಸಾವಿಗೆ ತಾವೇ ಕಾರಣ ಎಂದು ಒಡಿಯಾ ಭಾಷೆಯಲ್ಲಿ ಬರೆದಿಟ್ಟಿದ್ದಾರೆ.

ಸೆಪ್ಟಂಬರ್ 8 ರಂದು ದೆಹಲಿಯ ಎರಡು ಆಸ್ಪತ್ರೆಗಳಿಗೆ ತಮ್ಮ ಮಗನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎರಡು ಆಸ್ಪತ್ರೆಗಳಿಗೆ ನೊಟೀಸ್ ನೀಡಿದೆ. ಇನ್ನು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಪ್ರಧಾನಿ ಮೋದಿ ಆಯೋಜಿಸಿದ್ದ BRICS ಗಾಲಾ ಡಿನ್ನರ್‌ಗೆ ಚೀನಾ ಅಧ್ಯಕ್ಷ Xi Jinping ಗೈರು: ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ..!

ಅಮೆರಿಕಾ ಸರ್ವಾಧಿಕಾರತ್ವ-ಆರ್ಥಿಕ ನಿರ್ಬಂಧಗಳಿಗೆ ಅಂತ್ಯ ಹಾಡಲು 'BRICS' ಒಕ್ಕೂಟ ಸ್ಥಾಪನೆ: Iran