ನವದೆಹಲಿ: ಬಾಬಾ ರಾಮ್ ದೇವ್, ಗುರ್ಮೀತ್ ರಾಮ್ ರಹೀಂ ಸಿಂಗ್‍ರಂಥ ಸಂತರಿಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯಿಂದ ವಿನಾಯ್ತಿ ನೀಡಬಹುದೇ ಎಂಬ ಬಗ್ಗೆ ಕೇಂದ್ರ ಚಿಂತನೆ ನಡೆಸುತ್ತಿದೆ.
ಈ ವಿನಾಯಿತಿ ನೀಡುವಂತೆ ರಾಮ್ ದೇವ್ ಮತ್ತು ಸಿಂಗ್ ಕೋರಿಕೆ ಸಲ್ಲಿಸಿದ್ದಾರೆ. ಸರ್ಕಾರವು ಭದ್ರತೆಗೆ ಯಾವುದೇ ಲೋಪ ಆಗದಂತೆ ಹಾಗೂ ಯಾವುದೇ ಪೂರ್ವಗ್ರಹವಿಲ್ಲದೆ ಈ ಬೇಡಿಕೆಯನ್ನು ಪರಿಶೀಲಿಸಿ, ನಿರ್ಧಾರ ಕೈಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಹಾಯಕ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. ಇನ್ನೂ ಕೆಲ ಸಂತರು ವಿಮಾನಗಳಲ್ಲಿ ತಮ್ಮ ತ್ರಿಶೂಲ ಕೊಂಡೊಯ್ಯಲು ಅವಕಾಶ ನೀಡುವಂತೆ ಕೋರಿದ್ದು, ನಿಯಮ ಸಡಿಲಿಕೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.