ರಾಮ್‌ದೇವ್‌ 
ದೇಶ

ಯೋಗ ಮೂಲಕ ದೇಹಕ್ಕೆ ಅಚ್ಚೇದಿನ್ ಬರುತ್ತೆ; ದೇಶಕ್ಕೆ ಯಾವಾಗ ಬರುತ್ತೋ: ರಾಮ್‌ದೇವ್‌

ಯೋಗದಿಂದ ಜನರಿಗೆ ಉತ್ತಮ ಆರೋಗ್ಯ ದೊರೆಯುವ ಮೂಲಕ ಅವರ ಬಾಳಿನಲ್ಲಿ ಅಚ್ಛೇ ದಿನ್ ಬರುತ್ತದೆ. ಆದರೆ ದೇಶಕ್ಕೆ ಅಚ್ಛೆ ದಿನ್ ಯಾವಾಗ ಬರುತ್ತದೆ ಎಂಬುದು...

ಜೈಸಲ್‌ಮೇರ್‌: ಯೋಗದಿಂದ ಜನರಿಗೆ ಉತ್ತಮ ಆರೋಗ್ಯ ದೊರೆಯುವ ಮೂಲಕ ಅವರ ಬಾಳಿನಲ್ಲಿ ಅಚ್ಛೇ ದಿನ್ ಬರುತ್ತದೆ. ಆದರೆ ದೇಶಕ್ಕೆ ಅಚ್ಛೆ ದಿನ್ ಯಾವಾಗ ಬರುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅಥವಾ ದೇವರಿಗೆ ಮಾತ್ರ ಗೊತ್ತು ಎಂದು ಯೋಗ ಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.
ಭಾರತೀಯರು ವಿದೇಶೀ ಬ್ಯಾಂಕುಗಳಲ್ಲಿ ಗುಡ್ಡೆ ಹಾಕಿರುವ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರಲು ಧನಾತ್ಮಕ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವರೆಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ದೇವ್ ಬಾಬಾ ಅವರು, ನರೇಂದ್ರ ಮೋದಿ ಅವರೊಂದಿಗೆ ಕಪ್ಪು ಹಣದ ವಿಷಯವನ್ನು ಚರ್ಚಿಸಿದ್ದೇನೆ. ಕಪ್ಪು ಹಣವನ್ನು ಮರಳಿ ತರಲು ಅವರು ಧನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಮತ್ತು ಅವರಿಗೆ ಈ ವಿಷಯದಲ್ಲಿ ಇನ್ನೂ ಸಾಕಷ್ಟು ಸಮಯಾವಕಾಶ ಇದೆ ಎಂದರು.
ಬಾಬಾ ರಾಮ್‌ ದೇವ್‌ ಅವರು ರಾಜಸ್ಥಾನ ಮುಂಚೂಣಿ ಪ್ರಧಾನ ಕಾರ್ಯಾಲಯದ ಬಿಎಸ್‌ಎಫ್ ಸಿಬ್ಬಂದಿಗಳಿಗಾಗಿ ಇಲ್ಲಿ ಯೋಗ ತರಬೇತಿಯನ್ನು ಕೈಗೊಳ್ಳುತ್ತಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ದೃಢತೆಗಾಗಿ ಬಾಬಾ ಅವರು ಈ ತರಬೇತಿ ಶಿಬಿರವನ್ನು ಕೈಗೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!