ಸಾಂಕೇತಿಕ ಚಿತ್ರ 
ದೇಶ

ಆನ್ ಲೈನ್ ಗೆ ಬಂತು ಪ್ರಾಣಿಗಳ ಮಾರಾಟ...!

ಕಾರು, ಫ್ರಿಜ್ ಅಥವಾ ಇತರ ಯಾವುದೇ ಬೆಲೆಬಾಳುವ ವಸ್ತುಗಳನ್ನು ಒಎಲ್ ಎಕ್ಸ್, ಕ್ವಿಕ್ಕರ್ ನಂತಹ ಆನ್ ಲೈನ್ ಜಾಹಿರಾತುಗಳ ಮೂಲಕ ಮಾರಾಟ ಮಾಡುವ ಪ್ರವೃತ್ತಿ...

ಚೆನ್ನೈ: ಕಾರು, ಫ್ರಿಜ್ ಅಥವಾ ಇತರ ಯಾವುದೇ ಬೆಲೆಬಾಳುವ ವಸ್ತುಗಳನ್ನು ಒಎಲ್ ಎಕ್ಸ್, ಕ್ವಿಕ್ಕರ್ ನಂತಹ ಆನ್ ಲೈನ್ ಜಾಹಿರಾತುಗಳ ಮೂಲಕ ಮಾರಾಟ ಮಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಆದರೆ ಅದೀಗ ಪ್ರಾಣಿಗಳ ಮಾರಾಟದವರೆಗೂ ತಲುಪಿದೆ. ಆನ್ ಲೈನ್ ವರ್ಗೀಕೃತ ಜಾಹಿರಾತುಗಳಲ್ಲಿ ಪ್ರಾಣಿ, ಪಕ್ಷಿಗಳ ಮಾರಾಟಕ್ಕಿರುವ ವಿಭಾಗದಲ್ಲಿ ಜಾಹಿರಾತು ನೀಡಿದರೆ ಸಾಕು, ನಿಮ್ಮ ಪ್ರಾಣಿ, ಪಕ್ಷಿಗಳಿಗೆ ಬೇಡಿಕೆ ಬರುತ್ತದೆ.

 ಗ್ರಾಮಾಂತರ ಪ್ರದೇಶಗಳು ಡಿಜಿಟಲೀಕರಣ ವ್ಯವಸ್ಥೆಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಆನ್ ಲೈನ್ ವ್ಯವಹಾರ ವ್ಯವಸ್ಥೆ ಕೂಡ ಹಳ್ಳಿಗಳಿಗೆ ಕಾಲಿಡುತ್ತಿವೆ. ಹಾಗಾಗಿ ಒಎಲ್ ಎಕ್ಸ್, ಕ್ವಿಕ್ಕರ್ ನಲ್ಲಿ ಹಸು, ಎಮ್ಮೆ, ಎತ್ತು, ಮೇಕೆ, ಕುರಿ, ಕೋಳಿ ಹಾಗೂ ಇತರ ಸಾಕುಪ್ರಾಣಿಗಳ ಮಾರಾಟದ ಜಾಹಿರಾತುಗಳನ್ನು ರೈತರು ನೀಡುತ್ತಿದ್ದಾರೆ. ಜಾಹಿರಾತಿನಲ್ಲಿ ಪ್ರಾಣಿಯ ಬಗ್ಗೆ ಸಂಪೂರ್ಣ ವಿವರ, ಬೆಲೆ ಎಲ್ಲವೂ ನಮೂದಾಗಿರುತ್ತದೆ.ಇದಕ್ಕಾಗಿ ಒಎಲ್ಎಕ್ಸ್, ಕ್ವಿಕ್ಕರ್ ವರ್ಗೀಕೃತ ಜಾಹಿರಾತಿನಲ್ಲಿ ಪ್ರಾಣಿಗಳ ಮಾರಾಟಕ್ಕೆಂದು ಪ್ರತ್ಯೇಕ ವಿಭಾಗವಿದೆ. ಇದು ದೇಶಾದ್ಯಂತ ಕಂಡುಬರುತ್ತಿದೆ.

''ನನ್ನ ಅಳಿಯನ ಸಲಹೆಯಂತೆ ನಾನು ಹಸುಗಳನ್ನು ಕೊಳ್ಳುವುದನ್ನು ಮತ್ತು ಮಾರಾಟ ಮಾಡುವುದನ್ನು ಆನ್ ಲೈನ್ ನಲ್ಲಿ ಮಾಡುತ್ತೇನೆ. ಅಳಿಯ ಇತ್ತೀಚೆಗೆ ಬಹ್ರೈನ್ ನಿಂದ ಊರಿಗೆ ಬಂದಿದ್ದ. ಆಗ ಮಾತನಾಡುವಾಗ, ನನ್ನ ಬಳಿ ಇರುವ ಹಸುವನ್ನು ಮಾರಾಟ ಮಾಡಬೇಕೆಂದಿದ್ದೇನೆ. ಯಾರೂ ಕೊಂಡುಕೊಳ್ಳಲು ಬರುವುದಿಲ್ಲ' ಎಂದಾಗ ಆನ್ ಲೈನ್ ಜಾಹಿರಾತಿನಲ್ಲಿ ವಿವರ ಕೊಡಿ ಎಂದು ಸಲಹೆ ನೀಡಿದ. ಅದರಂತೆ ಒಎಲ್ ಎಕ್ಸ್ ನಲ್ಲಿ ಜಾಹಿರಾತು ನೀಡಿದೆ. ಮೊದಲ ದಿನದಿಂದಲೇ ಕರೆಗಳು ಬರಲು ಆರಂಭಿಸಿದವು. ಎರಡೇ ವಾರಗಳಲ್ಲಿ ನನ್ನ ಹಸು ಮಾರಾಟವಾಯಿತು. ಈಗ ಹಸುಗಳನ್ನು ಕೊಳ್ಳುವುದು, ಮಾರುವುದು ಆನ್ ಲೈನ್ ಮೂಲಕವೇ ಎಂದು ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಗೌತಮ್ ಹೇಳುತ್ತಾರೆ.

ಒಂದು ಅಂಕಿಅಂಶ ಪ್ರಕಾರ, ದೇಶಾದ್ಯಂತ ಆನ್ ಲೈನ್ ಜಾಹಿರಾತಿನಲ್ಲಿ 7 ಸಾವಿರಕ್ಕೂ ಅಧಿಕ ಪ್ರಾಣಿ, ಪಕ್ಷಿಗಳ ಕುರಿತ ಜಾಹಿರಾತುಗಳು ಸಿಗುತ್ತವೆ. ಸೆಪ್ಟೆಂಬರ್ 11ರಂದು ಒಂದೇ ದಿನ 460 ಜಾಹಿರಾತುಗಳು ಸೇರ್ಪಡೆಗೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!