ನವದೆಹಲಿ: ರಸ್ತೆಗುಂಡಿಗಳು ಹಾಗೂ ಅವೈಜ್ಞಾನಿಕ ರಸ್ತೆ ಹಂಪ್‍ಗಳಿಂದ ಸವಾರರಿಗೆ ಕಿರಿಕಿರಿ ಮಾತ್ರ ಉಂಟಾಗುತ್ತದೆ ಎಂದು ನೀವು ಭಾವಿಸಿದಲ್ಲಿ ಅದು ತಪ್ಪು ಕಲ್ಪನೆ. ಏಕೆಂದರೆ, ಇವು ಅನೇಕರ ಸಾವಿಗೂ ರಹದಾರಿಯಾಗುತ್ತಿವೆ ಎಂಬ ಅಚ್ಚರಿಯ ಅಂಶ ಈಗ ಬಹಿರಂಗವಾಗಿದೆ.
ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರಸ್ತೆಗುಂಡಿಗಳು, ವೇಗ ನಿಯಂತ್ರಕಗಳು ಹಾಗೂ ಹಂಪ್‍ಗಳಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಬಗ್ಗೆ ವರದಿ ಸಂಗ್ರಹಿಸಿದೆ. ಅದರಂತೆ, 2014ರಲ್ಲಿ ಕರ್ನಾಟಕದ 970 ಮಂದಿ ಸೇರಿದಂತೆ ಭಾರತದಲ್ಲಿ ಬರೋಬ್ಬರಿ 11,400 ಮಂದಿ ಇವುಗಳಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಆ ಪೈಕಿ ಹೆಚ್ಚಿನವರು ಅಂದರೆ 4,455 ಮಂದಿ ಉತ್ತರಭಾರತದವರು. ರಸ್ತೆ ಕಾಮಗಾರಿ ನಡೆಸುವ ಏಜೆನ್ಸಿಗಳ ನಿರ್ಲಕ್ಷ್ಯ, ಸ್ಪೀಡ್ ಬ್ರೇಕರ್‍ಗಳಿಗೆ ನಿಗದಿತ ವಿನ್ಯಾಸ ಇಲ್ಲದಿರುವುದು ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಾವಿನ ವಿವರ (2014)
ರಸ್ತೆಗುಂಡಿಗಳಿಂದ ಅಪಘಾತ 11,106- ಸಾವು 3,039
ಸ್ಪೀಡ್ ಬ್ರೇಕರ್‍ಗಳಿಂದ ಅಪಘಾತ 11,008-ಸಾವು 3,633
ಹಂಪ್‍ಗಳಿಂದ ಅಪಘಾತ 13,449- ಸಾವು 4,726
ದುರಸ್ತಿ/ಕಾಮಗಾರಿ ವೇಳೆ ಮೃತಪಟ್ಟವರ ಸಂಖ್ಯೆ 4,098
ರಾಜ್ಯಗಳಲ್ಲಿ ಸಾವು-ನೋವು
ಉತ್ತರಪ್ರದೇಶ 4,455
ಕರ್ನಾಟಕ 970
ಮಧ್ಯಪ್ರದೇಶ 915
ಬಿಹಾರ 867
ಜಾರ್ಖಂಡ್ 478
ಒಡಿಶಾ 569