ಮುಂಬೈ: ರಾಕೇಶ್ ಮರಿಯಾ ಅವರ ಸ್ಥಾನಕ್ಕೆ ನೇಮಕಗೊಂಡ ಮುಂಬೈ ಪೊಲೀಸ್ ನೂತನ ಆಯುಕ್ತ ಅಹಮದ್ ಜಾವೇದ್ ಅವರು ಸ್ಟಾರ್ ಇಂಡಿಯಾ ಮಾಜಿ ಸಿಇಒ ಪೀಟರ್ ಮುಖರ್ಜಿ, ಪತ್ನಿ ಇಂದ್ರಾಣಿ ಮುಖರ್ಜಿ ಅವರನ್ನು ಈದ್ ಗೆ ಆಹ್ವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಹಮದ್ ಜಾವೇದ್ ಅವರು ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ಅವರನ್ನು 2014ರ ಜುಲೈನಲ್ಲಿ ಮುಂಬೈನ ವರ್ಲಿ ಪ್ರದೇಶದಲ್ಲಿರುವ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳ ಮೆಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಈದ್ ಪಾರ್ಟಿಗೆ ಆಹ್ವಾನಿಸಲಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಮುಂಬೈ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ನಂತರ ಪ್ರತಿಕ್ರಯಿಸಿದ ಅವರು, ನಿಷ್ಕಲ್ಮಶವಾಗಿ ತನಿಖೆ ನಡೆಯಲಿದ್ದು, ಪ್ರಕರಣದಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆ ಎಂದು ಹೇಳಿದ್ದರು.
ಈ ಪ್ರಕರಣದ ತನಿಖೆಯನ್ನು ಸೂಕ್ತವಾಗಿ ನಿರ್ಹವಹಿಸಿ, ದೊರೆತ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗವುದು ಎಂದು ಜಾವೇದ್ ತಿಳಿಸಿದ್ದರು. ಇಂದ್ರಾಣಿ ತನ್ನ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಆಕೆಯ ಡ್ರೈವರ್ ಜತೆ ಸೇರಿ ಏಪ್ರಿಲ್ 24, 2012 ರಲ್ಲಿ ಶೀನಾ ಬೋರಾಳನ್ನು ಹತ್ಯೆಗೈದಿದ್ದರು.