(ಸಾಂದರ್ಭಿಕ ಚಿತ್ರ) 
ದೇಶ

ತನು ಅರ್ಪಿಸಿದ್ದಕ್ಕೆ ಧನ ಬೇಡಿದಳು!

ಒಂದು ಹಳೆಯ ವಿದೇಶಿ ಜೋಕ್ ಇದೆ. ಒಬ್ಬಾಕೆ ಪೊಲೀಸ್ ಸ್ಟೇಷನ್‍ಗೆ ಬಂದು ತನ್ನ ಮೇಲೆ ಕಳೆದ ತಿಂಗಳು ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡುತ್ತಾಳೆ...

ಎರ್ನಾಕುಲಂ: ಒಂದು ಹಳೆಯ ವಿದೇಶಿ ಜೋಕ್ ಇದೆ. ಒಬ್ಬಾಕೆ ಪೊಲೀಸ್ ಸ್ಟೇಷನ್‍ಗೆ  ಬಂದು ತನ್ನ ಮೇಲೆ ಕಳೆದ ತಿಂಗಳು ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡುತ್ತಾಳೆ.

ಅತ್ಯಾಚಾರವಾಗಿ ಒಂದು ತಿಂಗಳ ನಂತರ ಯಾಕೆ ಕಂಪ್ಲೇಂಟ್ ನೀಡಲು ಬಂದಿದ್ದೀಯ ಎಂದು ಪೊಲೀಸರು ಕೇಳ್ತಾರೆ. ಆಗ ಆಕೆ ಹೇಳ್ತಾಳೆ..``ಆತ ಕೊಟ್ಟ ಚೆಕ್ ಬೌನ್ಸ್ ಆದ ನಂತರವೇ ಇದು ರೇಪ್ ಅಂತ ನನಗೆ ಗೊತ್ತಾಗಿದ್ದು ಸಾರ್ ಅಂತ''!

ಈ ವಿದೇಶಿ ಜೋಕ್ ಹೋಲುವ ಘಟನೆಯೊಂದು ಸ್ವದೇಶದ ಎರ್ನಾಕುಲಂನಲ್ಲಿ ನಡೆದಿದೆ. ವಿಚಾರಣೆಗೆಂದು ಕೇರಳ ಹೈಕೋರ್ಟ್ ಮುಂದೆ ಮಹಿಳೆಯೊಬ್ಬಳ ಕೇಸೊಂದು ಹಾಜರಾಗಿದೆ. ಅದು 2012ರಲ್ಲಿ ಆಕೆ ಪೊಲೀಸರಲ್ಲಿ ಸಲ್ಲಿಸಿದ್ದ ದೂರಿನ ವಿಚಾರಣೆ. ತನ್ನೊಂದಿಗೆ ಮೂರು ಮಂದಿ ದೈಹಿಕ ಸುಖ ಹಂಚಿಕೊಂಡಿದ್ದಾರೆ. ಆದರೆ ಆನಂತರ ಅವರೆಲ್ಲರೂ ಹಣ ಕೊಡದೆ ನನ್ನನ್ನು ವಂಚಿಸಿದ್ದಾರೆ ಎಂಬುದು ಆಕೆಯ ದೂರು!

ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆಕೆ ವೃತ್ತಿಪರ ವೇಶ್ಯೆಯೇನಲ್ಲ. ಮೂರು ವರ್ಷದ ನಂತರ ಪ್ರಕರಣ ಕೋರ್ಟ್ ಮೇಜಿಗೆ ಬಂದಾಗ ಇವೆರಡನ್ನೂ ಮೀರಿಸುವ ಅಚ್ಚರಿ ಆಕೆಗೆ ಕಾದಿತ್ತು. ಶುಕ್ರವಾರ ನಡೆದ ವಾದವಿವಾದದ ಹೊತ್ತಿಗೆ ಮಹಿಳೆಯೂ ಆರೋಪಿಯೇ ಎಂದು ಹೇಳಿ ಅಚ್ಚರಿ ಹುಟ್ಟಿಸಿದೆ. ಆರೋಪ ಕ್ಕೊಳಗಾಗಿದ್ದ ಮೂವರು ಪುರುಷರು ಪ್ರತ್ಯಾರೋಪ ಮಾಡಿ ಎರ್ನಾಕುಲಂ ಪೊಲೀಸ್ ಸ್ಟೇಷನ್ ನಲ್ಲಿ 3 ವರ್ಷದ ಮುಂಚೆ ಸಲ್ಲಿಸಿದ್ದ ದೂರು ಅರ್ಜಿಯನ್ನು ಪರಿಗಣಿಸಿದ ನ್ಯಾ. ಪಿ ಉಬೇದ್ ಆಕೆಯೂ ಮೇಲೆ 6 ಕೇಸ್‍ಗಳಡಿಯಲ್ಲಿ ಶಿಕ್ಷಾರ್ಹಳು ಎಂದು ಹೇಳಿದ್ದಾರೆ.

ವಂಚನೆ, ಸಂಚು, ಬೆದರಿಕೆ, ಅನೈತಿಕ ಚಟುವಟಿಕೆಗಳ ಮೇಲೆ ಕೇಸ್ ದಾಖಲಾಗಬೇಕೆಂದು ತಿಳಿಸಿದ ಕೂಡಲೇ ಆಕೆ ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾಳೆ. ``ಮಹಿಳೆಯೊಬ್ಬಳು ತಾನಾಗಿ ಪುರುಷರನ್ನು ಸೆಕ್ಸ್ ಗೆ ಆಹ್ವಾನಿಸಿ ಆನಂತರ ಹಣ ಸುಲಿಗೆಗೆ ನಿಲ್ಲುವುದಲ್ಲದೆ ಕೋರ್ಟ್ ಮುಂದೆ ಹಣ ಕೊಡಿಸಿ ಎಂದು ಕೇಳಿಕೊಳ್ಳುತ್ತಾಳೆ ಅಂದರೆ, ಕಾನೂ ನನ್ನು ಏನೆಂದುಕೊಂಡಿದ್ದಾರೆ'' ಎಂದು ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT