ಸಾಂದರ್ಭಿಕ ಚಿತ್ರ 
ದೇಶ

ಇಸಿಎಸ್ ಸೇರಲು ಬಯಸಿದ್ದ ಮಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಮಾಜಿ ಸೈನಿಕ

ವಿಲಕ್ಷಣ ಘಟನೆಯೊಂದರಲ್ಲಿ, ಭಾರತೀಯ ಸೇನೆಯ ಮಾಜಿ ಯೋಧರೊಬ್ಬರ ಮಗಳು ಇಸಿಎಸ್ ಉಗ್ರಗಾಮಿ ಸಂಘಟನೆಗೆ ಸೇರಲು...

ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ, ಭಾರತೀಯ ಸೇನೆಯ ಮಾಜಿ ಯೋಧರೊಬ್ಬರ ಮಗಳು ಇಸಿಎಸ್ ಉಗ್ರಗಾಮಿ ಸಂಘಟನೆಗೆ ಸೇರಲು ಬಯಸಿದ್ದಳು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಮಾಜಿ ಸೇನಾಧಿಕಾರಿಯ ಮಗಳು ಸಿರಿಯಾಕ್ಕೆ ತೆರಳಿ ಅಲ್ಲಿ ಯುದ್ಧದಲ್ಲಿ ಭಾಗವಹಿಸುವ ಯೋಜನೆ ಹಾಕಿಕೊಂಡಿದ್ದಳು. ಇದು ಅವಳ ತಂದೆಗೆ ವಿಷಯ ಗೊತ್ತಾಗಿ ಕೂಡಲೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಿಳಿಸಿದರು. ಇದೀಗ ಭದ್ರತಾ ಸಂಸ್ಥೆಯ ಅಧಿಕಾರಿಗಳು ವಿಷಯವನ್ನು ಕೈಗೆತ್ತಿಕೊಂಡಿದ್ದು, ಯುವತಿಯ ಮನಪರಿವರ್ತನೆಗೆ ಸಲಹೆ ನೀಡಲು ಪ್ರಯತ್ನಿಸುತ್ತಿದ್ದಾರೆ.

ಹಿಂದೂ ಧರ್ಮಕ್ಕೆ ಸೇರಿದವಳಾದ ಈ ಯುವತಿ ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಗೆ ತೆರಳಿದ್ದಳು. ಅಲ್ಲಿ ಇಸಿಎಸ್ ಉಗ್ರಗಾಮಿಗಳ ಸಂಪರ್ಕವಾಗಿ ಸಂಪೂರ್ಣ ಬದಲಾಗಿಬಿಟ್ಟಳು. ಸಾಧು ಸ್ವಭಾವ ಹೋಗಿ ಮೂಲಭೂತವಾದ ಆಕೆಯ ಮನಸ್ಸಿನಲ್ಲಿ ಬೇರುಬಿಟ್ಟಿತು.ಆಸ್ಟ್ರೇಲಿಯಾದಲ್ಲಿ ಮೂಲಭೂತವಾದ ಒಂದು ಬೆಳೆಯುತ್ತಿರುವ ಸಮಸ್ಯೆ.
ಸ್ವದೇಶಕ್ಕೆ ಬಂದಿದ್ದ ಯುವತಿಯ ಚಲನವಲನಗಳನ್ನು ನೋಡಿ ಸಂಶಯಪಟ್ಟ ತಂದೆ ಭದ್ರತಾಧಿಕಾರಿಗಳಿಗೆ ತಿಳಿಸಿದ್ದಾರೆ.ತನಿಖೆ ನಡೆಸಿದಾಗ ಯುವತಿ ಇಸಿಎಸ್ ಗೆ ಸದಸ್ಯರನ್ನು ನೇಮಕ ಮಾಡುವವರೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ತಿಳಿದು ಬಂದಿದೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಆಸ್ಟ್ರೇಲಿಯಾ ಮೂಲಕ ಸಿರಿಯಾಕ್ಕೆ ಪ್ರಯಾಣ ಬೆಳೆಸಲು ಯೋಜನೆ ರೂಪಿಸಿದ್ದಳು ಎಂಬುದು ತಿಳಿದುಬಂದಿದೆ.

ಇಸಿಎಸ್ ಉಗ್ರಗಾಮಿ ಸಂಘಟನೆಗೆ ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮೂಲಕ ಭಾರತೀಯ ಯುವಜನತೆಯನ್ನು ನೇಮಕಾತಿ ಮಾಡಿಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ, ಇಸಿಎಸ್ ನೇಮಕಾತಿ ಸದಸ್ಯೆ ಎಂದು ಆರೋಪಿಸಿ ಭಾರತೀಯ ಮಹಿಳೆಯೊಬ್ಬಳನ್ನು ಅರಬ್ ರಾಷ್ಟ್ರದಿಂದ ಗಡೀಪಾರು ಮಾಡಲಾಗಿತ್ತು. ಕಳೆದ ವಾರ ನಾಲ್ವರು ಭಾರತೀಯರು ಗಲ್ಫ್ ನಿಂದ ಗಡೀಪಾರಾಗಿ ಬಂದಿದ್ದರು.

ಇಂತಹ ಘಟನೆ ಮರುಕಳಿಸುತ್ತಿರುವುದು ನೋಡಿದರೆ ಯುವಜನತೆಯನ್ನು ಉಗ್ರವಾದಿಗಳನ್ನಾಗಿ ಬದಲಾಯಿಸುತ್ತಿರುವ ಸಮಸ್ಯೆ ಭಾರತ ದೇಶದಲ್ಲಿ ಆಳವಾಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಭದ್ರತಾ ಸಂಸ್ಥೆ ಪರಿಗಣಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT