ಸೌದಿಯಿಂದ ಭಾರತಕ್ಕೆ ಮರಳಲು ಕಾಯುತ್ತಿರುವ 50 ಶುಶ್ರೂಷಕಿಯರು
ಯೆಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50ಕ್ಕೂ ಹೆಚ್ಚು ಶುಶ್ರೂಷಕಿಯರು ...
ತಿರುವನಂತಪುರಂ: ಯೆಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50ಕ್ಕೂ ಹೆಚ್ಚು ಶುಶ್ರೂಷಕಿಯರು ಸೌದಿ ಅರೇಬಿಯ ಮತ್ತು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸೇವಾನುಭವ ಮತ್ತು ವೃತ್ತಿ ಪ್ರಮಾಣಪತ್ರ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿದ್ದಾರೆ.
ಸೌದಿ ಅರೇಬಿಯಾದ ಹಿಂಸಾಚಾರ ಪೀಡಿತ ಸ್ಮಾತಾ ಪ್ರಾಂತ್ಯದ ಗಡಿ ಪ್ರದೇಶದಿಂದ ಭಾನುವಾರ ರಾತ್ರಿ ಶುಶ್ರೂಷಕಿಯರನ್ನು ಸ್ಥಳಾಂತರಿಸಲಾಗಿದೆ.
ನಿರಂತರ ಶೇಲ್ ದಾಳಿ ನಡೆಯುತ್ತಿದ್ದು, ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ 150 ಹಾಸಿಗೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂರು ದಿನಗಳಿಂದ ಭಯದಲ್ಲಿ ಕಾಲ ನೂಕಿದ್ದೇವೆ. 50 ಶುಶ್ರೂಷಕಿಯರು ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದ್ದೇವೆ. ಇದು ನಮ್ಮ ಕೆಲಸದ ಕೊನೆಯ ದಿನ’ ಎಂದು ಶುಶ್ರೂಷಕಿಯೊಬ್ಬರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.