ಮುಂಬೈ: ಬಕ್ರೀದ್ ದಿನದಂತೆ ಮಾಂಸ ನಿಷೇಧ ಮಾಡಬೇಕು ಎಂಬ ಬಗ್ಗೆ ಮಧ್ಯಾಂತರ ತಡೆಯಾಜ್ಞೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಈ ಬಗ್ಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ವಿಭಾಗೀಯ ನ್ಯಾಯಪೀಠ, ಮಧ್ಯಾಂತರ ತಡೆಯಾಜ್ಞೆ ನೀಡಿದಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ವಿಶೇಷ ಅಧಿಕಾರ ನೀಡಿದಂತಾಗುತ್ತದೆಯೇ ಎಂದು ಪ್ರಶ್ನಿಸಿತು. ಈ ವರ್ಷದ ಮಾರ್ಚ್‍ನಲ್ಲಿ ಮಹಾರಾಷ್ಟ್ರ ಸರ್ಕಾರ ದನ ಮತ್ತು ಎತ್ತುಗಳ ಮಾಂಸದ ಮೇಲೆ ನಿಷೇಧ ಹೇರಿತ್ತು. ನಿಷೇಧ ಹೇರಿರುವುದು ಸಂವಿಧಾನ ದತ್ತವಾದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಧಕ್ಕೆಯಾಗಿದೆ ಎಂದು ಅರ್ಜಿದಾರರು ಬಾಂಬೆ ಹೈಕೋರ್ಟಲ್ಲಿ ವಾದ ಮಂಡಿಸಿದ್ದಾರೆ.