ನವದೆಹಲಿ: ಹನ್ನೊಂದನೇ ವಯಸ್ಸಿಗೇ ಆಕೆಗೆ ಮದುವೆಯ ಬಂಧನ ಎದುರಾಗಿತ್ತು. ಅದೂ ತಾಯಿಯೇ ಆ ಮದುವೆಗೆ ಮಗಳನ್ನು ಪೀಡಿಸಿದ್ದಳು.
ಮದುವೆಗೆ ಒಪ್ಪದ ಕಾರಣಕ್ಕೆ ತಾಯಿಯಿಂದ ನಿರಂತರ ಹಲ್ಲೆಗೆ ಒಳಗಾಗಿದ್ದರೂ ಹಠ ಸಾಧಿಸಿ ಮಾಂಗಲ್ಯಕ್ಕೆ ಕೊರಳೊಡ್ಡದೆ ಶಿಕ್ಷಣ ಮುಂದುವರಿಸಿ, ಇದೀಗ ತನ್ನನ್ನು ಕಾಡಿದ್ದ ಬಾಲ್ಯ ವಿವಾಹದ ವಿರುದ್ಧವೇ ಸಮರ ಸಾರಿದ್ದಾಳೆ. ಅದೂ ತನ್ನದೇ ಅನುಭವಗಳನ್ನು ಬರೆದು ಸಾವಿರಾರು ಮಂದಿಯ ಹೋರಾಟಕ್ಕೆ ಪ್ರೇರಣೆ ಯಾಗಿದ್ದಾಳೆ.
ರೇಖಾ ಕಲಿಂದಿ ಈಗ 18ರ ಯುವತಿ. 11ರ ವಯಸ್ಸಲ್ಲಿ ಮದುವೆಯಾಗು ಎಂದು ತಾಯಿಯೇ ನೀಡಿದ ಹಿಂಸೆ ಮತ್ತು ಅದನ್ನೆಲ್ಲಾ ಮೀರಿ ತಾನು ಶಿಕ್ಷಣ ಮುಂದುವರಿಸಿದ್ದನ್ನು `ಸ್ಟ್ರೆಂತ್ ಟು ಸೆ ನೋ' ಎಂಬ ಅನುಭವ ಕಥನ ಬರೆದಿದ್ದಾಳೆ.
ಪೆಂಗ್ವಿಲ್ ಬುಕ್ಸ್ ಪ್ರಕಟಿಸಿರುವ `ಸ್ಟ್ರೆಂತ್ ಟು ಸೆ ನೋ' ಇದೀಗ ಅದೇ ಹೆಸರಲ್ಲಿ ಟ್ವಿಟರ್ ಅಭಿಯಾನಕ್ಕೆ ಪ್ರೇರಣೆಯಾಗಿದ್ದು, ಸಾವಿರಾರು ಮಂದಿ ಬಾಲ್ಯ ವಿವಾಹದ ವಿರುದ್ಧ ಆನ್‍ಲೈನ್‍ನಲ್ಲಿ ಧ್ವನಿಯೆತ್ತಿದ್ದಾರೆ.