ದೇಶ

ಬೈಕ್‌ನೊಂದಿಗೆ 2 ಹೆಲ್ಮೆಟ್ ನೀಡುವಂತೆ ಕಂಪನಿಗಳಿಗೆ ಸೂಚಿಸಿ: ಮದ್ರಾಸ್ ಹೈಕೋರ್ಟ್

Mainashree

ಮದ್ರಾಸ್: ಬೈಕ್ ಮಾರುವಾಗಲೇ ಎರಡು ಹೆಲ್ಮೆಟ್ ಗಳನ್ನು ಕಡ್ಡಾಯಗೊಳಿಸಿ, ಮಾರುವಂತೆ ವಾಹನ ಕಂಪನಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವಾಗ ಚಾಲಕನ ಹಿಂದೆ ಕೂರುವವರಿಗೂ ಹೆಲ್ಮೆಟ್ ಕಡ್ಡಾಯ ಮಾಡಬೇಕು. ಅಲ್ಲದೇ, ಬೈಕ್ ಕೊಳ್ಳುವವ ವೇಳೆಯೇ ಎರಡು ಹೆಲ್ಮೆಟ್ ನೀಡುವಂತೆ ವಾಹನ ಮಾರಾಟ ಕಂಪನಿಗಳಿಗೆ ಸೂಚಿಸಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾ.ಎನ್ ಕಿರುಬಕರಣ್ ಅವರ ಆದೇಶದಿಂದ ರಾಜ್ಯದಲ್ಲಿ ಈಗಾಗಲೇ ಜುಲೈ 1ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಬೈಕ್ ನಲ್ಲಿ ಸವಾರಿಸುವ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವಂತಾಗಿದ್ದು, ಚಾಲಕ ಮತ್ತು ಹಿಂಬದಿ ಕೂರುವವರ ಪ್ರಾಣ ರಕ್ಷಣೆಗೂ ಮಹತ್ವ ನೀಡಿದಂತಾಗುತ್ತದೆ.

ವಾಹನ ಮಾರಾಟ ಮಾಡುವಾಗಲೇ ಎರಡು ಹೆಲ್ಮೆಟ್ ಕಡ್ಡಾಯವಾಗಿ ನೀಡಿದರೆ, ಬೈಕ್ ನಲ್ಲಿ ಕೂರುವ ಇಬ್ಬರು ಸವಾರರು ಹೆಲ್ಮೆಟ್ ಧರಿಸುತ್ತಾರೆ. ಇದರಿಂದ ಹೆಲ್ಮೆಟ್ ಬಳಸುವವರ ಸಂಖ್ಯೆ ಹೆಚ್ಚಾಗಲಿದ್ದು, ಅವಘಡಗಳನ್ನು ನಿಯಂತ್ರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

SCROLL FOR NEXT