ದೇಶ

ರಾಜ್ಯದಲ್ಲಿ ಸನಾತನ ಸಂಸ್ಥಾ ನಿಷೇಧಿಸುವುದಿಲ್ಲ: ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್

Mainashree

ಪಣಜಿ: ಸನಾತನ ಸಂಸ್ಥಾದ ಕಾರ್ಯಕರ್ತರ ಮೇಲೆ ಎಡ ಪಕ್ಷದ ನಾಯಕ ಗೋವಿಂದ ಪನ್ಸಾರೆ ಅವರ ಕೊಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ನಿಷೇಧಿಸುವಂತೆ ಕಾಂಗ್ರೆಸ್ ಆಗ್ರಹಿಸಿದ್ದು, ಯಾವುದೇ ಕಾರಣಕ್ಕೂ ಸನಾತನ ಸಂಸ್ಥೆಯನ್ನು ನಿಷೇಧಿಸುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಹೇಳಿದ್ದಾರೆ.

ಸನಾತನ ಸಂಸ್ಧಾ ಬಲಪಂಥೀಯಾ ಹಿಂದು ಸಂಸ್ಥೆ ದ್ವೇಷವನ್ನು ಬಿತ್ತುವುದರಲ್ಲಿ ಹಾಗು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ದೇಶವನ್ನು ಒಡೆಯುವುದರಲ್ಲಿ ನಿರತವಾಗಿರುವುದರಿಂದ ಅದನ್ನು ನಿಷೇಧಿಸಬೇಕು ಎಂದು ಗೋವಾ ಕಾಂಗ್ರೆಸ್ ವಕ್ತಾರ ದುರ್ಗದಾಸ್ ಕಾಮತ್ ಆಗ್ರಸಿದ್ದರು. ಈ ಸಂಸ್ಧೆಯನ್ನು ಗೋವಾದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲಿ ಈ ಸಂಘಟನೆಯನ್ನು ನಿಷೇಧಿಸಬೇಕಿದೆ.

ಚುನಾವಣೆ ಸಮಯದಲ್ಲಿ ಮಾತ್ರ ಜಾತ್ಯಾತೀತತೆಯ ಬಗ್ಗೆ ಮಾತನಾಡುವ ಬಿಜೆಪಿಗೆ ಈಗ ಪರೀಕ್ಷೆಯ ಸಮಯ" ಎಂದು ಕಾಮತ್ ಹೇಳಿದ್ದರು. ಗೋವಾ ಮುಖ್ಯಮಂತ್ರಿಯವರಿಗೆ ನಿಕಟವಾಗಿರುವ ಬಿಜೆಪಿ ಶಾಸಕರೊಬ್ಬರು ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದ ಬೆನ್ನಲ್ಲೇ ಕಾಮತ್ ಕೂಡ ಈಗ ಆಗ್ರಹಿಸಿದ್ದಾರೆ. ಬುಧವಾರ ಸೇಂಟ್ ಆಂದ್ರೆ ಕ್ಷೇತ್ರದ ಬಿಜೆಪಿ ಶಾಸಕ ವಿಷ್ಣು ವಾಗ್ ಕೂಡ ಸನಾತನ ಸಂಸ್ಥಾ ನಿಷೇಧಕ್ಕೆ ಆಗ್ರಹಿಸಿದ್ದರು.

"ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ. ವಿರೋಧವನ್ನು ಹತ್ತಿಕ್ಕಲು ಬುಲೆಟ್ ಬಳಸುವವರು ಉಗ್ರಗಾಮಿಗಳು. ಇದು ಗೋವಿಂದ ಪನ್ಸಾರೆ ಮತ್ತು ಎಂ ಎಂ ಕಲ್ಬುರ್ಗಿ ಅವರ ಹತ್ಯೆಯ ವಿಷಯದಲ್ಲಿ ತಿಳಿಯುತ್ತದೆ. ಸನಾತನ ಸಂಸ್ಥಾ ಸಂಘಟನೆಯ ಕೈವಾಡ ಸ್ಪಷ್ಟವಾಗಿದೆ" ಎಂದು ವಾಗ್ ದೂರಿದ್ದರು.

SCROLL FOR NEXT