ಐರ್ಲೆಂಡ್, ಅಮೆರಿಕ ದೇಶಗಳ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿ(ಸಂಗ್ರಹ ಚಿತ್ರ) 
ದೇಶ

ಐರ್ಲೆಂಡ್, ಅಮೆರಿಕ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಅಮೆರಿಕ ಮತ್ತು ಐರ್ಲೆಂಡ್ ದೇಶಗಳ ಪ್ರವಾಸ ಆರಂಭಿಸಿದ್ದಾರೆ.ಈ ಎರಡೂ...

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಅಮೆರಿಕ ಮತ್ತು ಐರ್ಲೆಂಡ್ ದೇಶಗಳ ಪ್ರವಾಸ ಆರಂಭಿಸಿದ್ದಾರೆ.ಈ ಎರಡೂ ದೇಶಗಳಿಗೆ ಏಳು ದಿನಗಳ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿ ಅವರು ಮೊದಲಿಗೆ ಇಂದು ಐರ್ಲೆಂಡ್ ಗೆ ತೆರಳಲಿದ್ದು, ಅಲ್ಲಿನ ಪ್ರಧಾನಿ ಎಂಡ ಕೆನ್ನಿ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಭಾರತೀಯ ಸಮಾಜವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಐರ್ಲೆಂಡ್ ಗೆ ಪ್ರವಾಸಕ್ಕೆ ಹೊರಡುವ ಮುನ್ನ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಮುಂದಿನ ವರ್ಷಗಳಲ್ಲಿ ಐರ್ಲೆಂಡ್ ನೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು  ವೃದ್ಧಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ. ಇಂದು ಸಂಜೆ ಮೋದಿ ಅವರು, ಐರ್ಲೆಂಡಿನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿ ಅಮೆರಿಕಕ್ಕೆ ತೆರಳಲಿದ್ದಾರೆ.

ನ್ಯೂಯಾರ್ಕ್ ನಲ್ಲಿ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನೇತೃತ್ವದಲ್ಲಿ ನಡೆಯಲಿರುವ ಶಾಂತಿಮಾತುಕತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಿಶ್ವದ ಅಗ್ರಗಣ್ಯ ನಾಯಕರ ಜೊತೆ, ಪ್ರಮುಖ ಹೂಡಿಕೆದಾರರು ಮತ್ತು ಆರ್ಥಿಕ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತುಕತೆ, ಸಂವಾದ ನಡೆಸಲಿದ್ದಾರೆ. ಸುಮಾರು 500 ಕಂಪೆನಿಗಳು ಇದರಲ್ಲಿ ಭಾಗವಹಿಸಿ ಭಾರತ ದೇಶದಲ್ಲಿ ಹೂಡಿಕೆ ಮಾಡುವ ಕುರಿತು ಮಾತುಕತೆ ನಡೆಸಲಿವೆ. ಅಮೆರಿಕದ ವೆಸ್ಟ್ ಕೋಸ್ಟ್ ರಾಜ್ಯದಲ್ಲಿರುವ ಫೇಸ್ ಬುಕ್ ಕೇಂದ್ರ ಕಚೇರಿಗೆ ಮೋದಿಯವರು ಭೇಟಿ ನೀಡಿ ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್ ವರ್ಗ್ ಅವರನ್ನು ಹಾಗೂ ಗೂಗಲ್ ಮತ್ತು ತೆಸ್ಲಾ ಮೋಟರ್ಸ್ ಕಚೇರಿಗಳಿಗೂ ಭೇಟಿ ನೀಡಲಿದ್ದಾರೆ.

ಸೆಪ್ಟೆಂಬರ್ 27ರಂದು ಮೋದಿಯವರು, ಸಾನ್ ಜೋಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕದ ಇಂದಿನ ಭೇಟಿ ಕಳೆದ ವರ್ಷದ ಭೇಟಿಯ ಅಡಿಪಾಯಕ್ಕೆ ಭದ್ರ ಕಟ್ಟಡವನ್ನು ನಿರ್ಮಿಸಲಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿಯಾದ ಬಳಿಕ ಅಮೆರಿಕಕ್ಕೆ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದು, ವಿಶ್ವಸಂಸ್ಥೆ 70ನೇ ವರ್ಷಾಚರಣೆಯ ಸಂದರ್ಭದಲ್ಲಿ ಐತಿಹಾಸಿಕ ಭೇಟಿಯಾಗಿರುತ್ತದೆ. ಈ ಭೇಟಿ ಫಲಪ್ರದವಾಗಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯೊಂದಿಗೆ ಭಾರತ ಪ್ರಮುಖವಾದ ಬಾಂಧವ್ಯ ಹೊಂದಿದೆ. ಕಳೆದ ಜುಲೈ ನಲ್ಲಿ ವಿಶ್ವಸಂಸ್ಥೆಗೆ ನಾನು ಪತ್ರ ಬರೆದಿದ್ದು, ಅದರಲ್ಲಿ ವಿಶ್ವಸಂಸ್ಥೆಯ ಕಾರ್ಯಸೂಚಿ ಮತ್ತು ಸುಧಾರಣೆ ಕುರಿತು ಭಾರತದ ದೃಷ್ಟಿಕೋನದ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದೆ. ಅದಕ್ಕೆ ಅನೇಕ ದೇಶಗಳ ನಾಯಕರು ಭಾರತದ ಬಗ್ಗೆ ಶ್ಲಾಘಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವರ್ಷ ನ್ಯೂಯಾರ್ಕ್ ನಲ್ಲಿ ಜಿ-4 ರಾಷ್ಟ್ರಗಳ ಶೃಂಗಸಭೆಯ ಆತಿಥೇಯವನ್ನು ಭಾರತ ವಹಿಸಲಿದ್ದು, ವಿಶ್ವಸಂಸ್ಥೆ ಭದ್ರತಾ ಸಮಿತಿಯ ಸುಧಾರಣೆಯೇ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ