ಸಾಲು ಮರದ ತಿಮ್ಮಕ್ಕ-ಭಾರತಿ ವಿಷ್ಣುವರ್ಧನ್ 
ದೇಶ

'ಪದ್ಮ' ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕ, ಭಾರತಿ ವಿಷ್ಣುವರ್ಧನ್ ಸೇರಿ 30 ಹೆಸರು ಶಿಫಾರಸು

ಶಿಕ್ಷಣ, ವೈದ್ಯಕೀಯ, ಕಲೆ, ವಿಜ್ಞಾನ, ಕ್ರೀಡೆ, ಸಿನಿಮಾ ಹಾಗೂ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸುಮಾರು...

ಬೆಂಗಳೂರು: ಶಿಕ್ಷಣ, ವೈದ್ಯಕೀಯ, ಕಲೆ, ವಿಜ್ಞಾನ, ಕ್ರೀಡೆ, ಸಿನಿಮಾ ಹಾಗೂ ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸುಮಾರು 30 ಗಣ್ಯರ ಹೆಸರುಗಳನ್ನು ಪ್ರತಿಷ್ಠಿತ ಪದ್ಮ ಶ್ರೇಣಿ ಪ್ರಶಸ್ತಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್‌, ವಿಜ್ಞಾನಿ ಎ.ಆರ್‌.ಶಿವಕುಮಾರ್‌, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು, ಹಿರಿಯ ವಿದ್ವಾಂಸ ಪ್ರೊ.ಜಿ.ವೆಂಕಟಸುಬ್ಬಯ್ಯ, ವೈದ್ಯ, ಡಾ.ಸುದರ್ಶನ್‌ಬಲ್ಲಾಳ್‌ ಸೇರಿಂದತೆ 30 ಗಣ್ಯರ ಹೆಸರುಗಳನ್ನು ಪದ್ಮಶ್ರೀ ಪ್ರಶಸ್ತಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿ ಬುಧವಾರ ಕಳುಹಿಸಿದೆ.

ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ತಾನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿದವರ ಹೆಸರುಗಳನ್ನು ಅಧಿಕೃತವಾಗಿಯೇ ಬಹಿರಂಗಪಡಿಸಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರ ಈ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡು ಕೇಂದ್ರ ಸರ್ಕಾರಕ್ಕೆ ಸಾಧಕರ ಹೆಸರು ಶಿಫಾರಸು ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿತ್ತು.

"ಪದ್ಮ' ಪ್ರಶಸ್ತಿ ಶಿಫಾರಸು ಪಟ್ಟಿ
ಪದ್ಮಶ್ರೀ: ಡಾ.ಸಿ.ಎಂ.ಮುತ್ತಯ್ಯ (ಅಥ್ಲೆಟಿಕ್ಸ್‌), ಡಾ.ಎಚ್‌.ಸುದರ್ಶನ್‌ ಬಲ್ಲಾಳ್‌ (ವೈದ್ಯಕಿಯ), ಡಾ.ಭಾರತಿ ವಿಷ್ಣುವರ್ಧನ್‌ (ಸಿನಿಮಾ), ಎಚ್‌.ಸಿ.ತಿಮ್ಮಯ್ಯ(ವಾಸ್ತು ಶಿಲ್ಪ), ಡಾ.ಪೀಟರ್‌ ಎ.ಲೂಯಿಸ್‌ (ಫೈನ್‌ ಆರ್ಟ್ಸ್), ಮಾಸ್ಟರ್‌ ಹಿರಣ್ಣಯ್ಯ (ನಾಟಕ), ಡಾ.ಸಿ.ವಿ.ಹರಿನಾರಾಯಣ (ಆಲೋಪತಿ), ಎ.ಆರ್‌.ಶಿವಕುಮಾರ್‌ (ವಿಜ್ಞಾನ), ಡಾ.ಬಸವರಾಜ್‌ ನೆಲ್ಲೀಸರ (ಕಲೆ ಮತ್ತು ಸಾಹಿತ್ಯ), ಎಸ್‌.ಜಿ.ವಾಸುದೇವ್‌ (ಚಿತ್ರಕಲೆ), ವಿಕಾಸ ಗೌಡ (ಅಥ್ಲೆಟಿಕ್ಸ್‌), ಡಾ.ಎಂ.ಎಂ.ಜೋಶಿ (ವೈದ್ಯಕೀಯ), ಡಾ.ಪದ್ಮಿನಿ ಪ್ರಸಾದ್‌ (ವೈದ್ಯಕೀಯ), ಮಧುಪಂಡಿತ್‌ ದಾಸ್‌ (ಸಮಾಜಸೇವೆ), ತುಂಬೆ ಮೊಯಿದ್ದೀನ್‌ (ಶಿಕ್ಷಣ), ಡಾ.ಚಂದ್ರಪ್ಪ ಎಸ್‌.ರೇಶ್ಮಿ (ವೈದ್ಯಕೀಯ), ಡಾ.ಬಿ.ಟಿ.ರುದ್ರೇಶ್‌ (ವೈದ್ಯಕೀಯ), ಡಾ.ನಾಗತಿಹಳ್ಳಿ ಚಂದ್ರಶೇಖರ್‌ (ಕಲೆ ಮತ್ತು ಸಾಹಿತ್ಯ)

ಪದ್ಮಭೂಷಣ: ಹೋ.ಶ್ರೀನಿವಾಸಯ್ಯ (ಸಮಾಜ ಸೇವೆ), ಡಾ.ಡಿ.ಜಿ.ಬೆನಕಪ್ಪ (ವೈದ್ಯಕೀಯ), ಸಾಲುಮರದ ತಿಮ್ಮಕ್ಕ (ಪರಿಸರ), ಪಂಡಿತ್‌ ಎಂ. ವೆಂಕಟೇಶ್‌ಕುಮಾರ್‌ (ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ), ಏಣಗಿ ಬಾಳಪ್ಪ (ನಾಟಕ), ಪ್ರೊ.ಜಿ.ವೆಂಕಟಸುಬ್ಬಯ್ಯ (ನಿಘಂಟು), ಡಾ.ಕದ್ರಿ ಗೋಪಾಲನಾಥ್‌ (ಕಲೆ), ಡಾ.ಬಿ.ರಮಣರಾವ್‌ (ವೈದ್ಯಕೀಯ), ಡಾ.ಸಿ.ಜಿ.ಕೃಷ್ಣದಾಸ್‌ ನಾಯರ್‌ (ವಿಜ್ಞಾನ)

ಪದ್ಮವಿಭೂಷಣ: ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು (ಸಮಾಜಸೇವೆ), ಡಾ.ಮುಮ್ತಾಜ್‌ ಅಹಮದ್‌ ಖಾನ್‌ (ಶಿಕ್ಷಣ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ