ಮುಂಬೈ: 2006ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ನ್ಯಾಯಾಲಯ ಸೆ.30ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ಪ್ರಕರಣದಲ್ಲಿ ಭಾಗಿಯಾದವರ ಶಿಕ್ಷೆ ಪ್ರಮಾಣ ಕುರಿತ ವಿಚಾರಣೆ ವೇಳೆ, ಸಾವಿನ ದಲ್ಲಾಳಿಗಳು ಕರುಣೆಗೆ ಅರ್ಹರಲ್ಲ ಎಂದಿದ್ದ ವಿಚಾರಣಾಧಿಕಾರಿಗಳ ಸರ್ಕಾರಿ ಅಭಿಯೋಜಕರು, ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ 12 ಜನರ ಪೈಕಿ ಎಂಟು ಮಂದಿಗೆ ಮರಣದಂಡನೆ ವಿಧಿಸುವಂತೆ ಕೋರಿದ್ದರು. 2006ರಲ್ಲಿ 200 ಮಂದಿಯನ್ನು ಬಲಿತೆಗೆದುಕೊಂಡು, 800ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಮೋಕಾ ನ್ಯಾಯಾಲಯ, 13 ಆರೋಪಿಗಳ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ 12 ಮಂದಿ ತಪ್ಪಿತಸ್ಥರು ಎಂದಿತ್ತು.