ಕೋಲ್ಕತ್ತಾ: ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳ ಬಗ್ಗೆ ನೇತಾಜಿ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ದೈನಿಕ್ ಭಾಸ್ಕರ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ.
ನೆಹರು ನೇತಾಜಿ ವಿಷಯದಲ್ಲಿ ಮಾಡಿರುವ ತಪ್ಪಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ತನ್ನ ಬಳಿಯಿರುವ 150 -160 ಕಡತಗಳನ್ನು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ಚಂದ್ರಕುಮಾರ್ ಬೋಸ್ ಒತ್ತಾಯಿಸಿದ್ದಾರೆ. ತಮ್ಮ ತಂದೆ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಮಾಹಿತಿ ಕಲೆಹಾಕಲು 1957 ರಲ್ಲಿ ಜಪಾನ್ ಗೆ ತೆರಳಿದಾಗ ಅವರ ವಿರುದ್ಧ ಅಂದಿನ ಪ್ರಧಾನಿ ನೆಹರು ಗೂಢಚಾರಿಕೆ ನಡೆಸಿದ್ದರು. ಸುಭಾಷ್ ಚಂದ್ರ ಬೋಸರ ವಿಷಯದಲ್ಲಿ ನೆಹರು ಮಾಡಿದ ತಪ್ಪಿಗೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.
ಕ್ಷಮೆ ಯಾಚಿಸದೇ ಇದ್ದರೆ ಸುಭಾಷ್ ಚಂದ್ರ ಬೋಸರಿ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಪಿತೂರಿ ಬಗ್ಗೆ ಅರಿವಿದ್ದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅದಕ್ಕೆ ಬೆಂಬಲಿಸುತ್ತಿದ್ದರು ಎಂಬ ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ ಚಂದ್ರಕುಮಾರ್ ಬೋಸ್. ಇದೇ ವೇಳೆ ಸುಭಾಷ್ ಚಂದ್ರ ಬೋಸರು ಚೆಕ್ ನ ಯುವತಿಯನ್ನು ಮದುವೆಯಾಗಿದ್ದರು. ಅವರಿಬ್ಬರಿಗೂ ನೀಮಾ ಎಂಬ ಮಗಳಿದ್ದಳು ಎಂಬ ವಿಷಯವನ್ನು ಚಂದ್ರಕುಮಾರ್ ಬೋಸ್ ತಳ್ಳಿಹಾಕಿದ್ದಾರೆ.