ಮುಖೇಶ್ ಅಂಬಾನಿ 
ದೇಶ

ಶ್ರೀಮಂತರಲ್ಲಿ ಮುಖೇಶ್ ನಂ.1

ರಿಲಯೆನ್ಸ್ ಇಂಡಸ್ಟ್ರೀಸ್‍ನ ಮುಖೇಶ್ ಅಂಬಾನಿ ಸತತ ಒಂಬತ್ತನೇ ವರ್ಷ ದೇಶದ ನಂಬರ್ ಒನ್ ಶ್ರೀಮಂತ ಪಟ್ಟವನ್ನು...

ಸಿಂಗಾಪುರ: ರಿಲಯೆನ್ಸ್ ಇಂಡಸ್ಟ್ರೀಸ್‍ನ ಮುಖೇಶ್ ಅಂಬಾನಿ ಸತತ ಒಂಬತ್ತನೇ ವರ್ಷ ದೇಶದ ನಂಬರ್ ಒನ್ ಶ್ರೀಮಂತ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಅವರ ಒಟ್ಟಾರೆ ಆಸ್ತಿ ಮೌಲ್ಯ 1890 ಕೋಟಿ ಡಾಲರ್ (ಸುಮಾರು ರು.1.18 ಲಕ್ಷ ಕೋಟಿ) ಗಳಾಗಿದೆ ಎಂದು ಫೋರ್ಬ್ಸ್  ಬಿಡುಗಡೆ ಮಾಡಿರುವ ಭಾರತ ದ ಶ್ರೀಮಂತರ ಪಟ್ಟಿಯಲ್ಲಿ ಹೇಳಿದೆ. ಸನ್ ಫಾರ್ಮಾ  ಕಂಪನಿಯ ದಿಲೀಪ್ ಸಾಂಘ್ವಿ1,800 ಕೋಟಿ ಡಾಲರ್‍ಗಳೊಂದಿಗೆ 2ನೇ ಸ್ಥಾನದಲ್ಲಿ ದ್ದರೆ, 1,590 ಕೋಟಿ ಡಾಲರ್‍ಗಳೊಂದಿಗೆ ವಿಪ್ರೋ ಕಂಪನಿಯ ಅಜೀಂ ಪ್ರೇಮ್ ಜಿ 3ನೇ   ಸ್ಥಾನದಲ್ಲಿದ್ದಾರೆ. ನೂರು ಮಂದಿಯ ಈ ಪಟ್ಟಿಯ ಮೊದಲ ಹತ್ತು ಶ್ರೀಮಂತರಲ್ಲಿ ಹಿಂದೂಜಾ ಸಹೋದರರು 4, ಪಲ್ಲೋನ್‍ಜಿ ಮಿಸ್ತ್ರಿ 5, ಶಿವನಾಡರ್ 6, ಗೋದ್ರೆ-ಜ್ ಕುಟುಂಬ 7, ಲಕ್ಷ್ಮಿ ಮಿತ್ತಲ್ 8, ಸೈರಸ್ ಪೂನಾವಾಲ 9, ಕುಮಾರ ಮಂಗಳಂ ಬಿರ್ಲಾ 10ನೇ ಸ್ಥಾನದಲ್ಲಿದ್ದಾರೆ. ಆನ್‍ಲೈನ್ ಮಾರುಕಟ್ಟೆ ಕಂಪನಿ ಫ್ಲಿಪ್ ಕಾರ್ಟ್  ಸಂಸ್ಥಾಪಕರು, ಇಂಡಿಗೋ ಸಹ ಸಂಸ್ಥಾಪಕ ರಾಕೇಶ್ ಗಂಗ್ವಾಲ್ ಸೇರಿದಂತೆ 12 ಮಂದಿ ಹೊಸಬರು ಈ ಪಟ್ಟಿಗೆ ಸೇರಿದ್ದಾರೆ. ಗಂಗ್ವಾಲ್ 70ನೇಸ್ಥಾನದಲ್ಲಿದ್ದರೆ, ಅವರ ಪಾಲುದಾರ ರಾಹುಲ್ ಭಾಟಿಯಾ 38ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್- ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ!

ನಟ ಸಲ್ಮಾನ್ ಖಾನ್ ತಂದೆ ಆರೋಗ್ಯ ಏರುಪೇರು: Brain Haemorrhage, ಮುಂಬೈ ಆಸ್ಪತ್ರೆಗೆ ದಾಖಲು!

India AI Impact Summit: ಚೀನಾದ ರೋಬೋಡಾಗ್ ವಿವಾದ; ಸ್ಟಾಲ್ ತೆರವುಗೊಳಿಸಲು ಗಾಲ್ಗೋಟಿಯಾಸ್ ವಿವಿಗೆ ಸೂಚನೆ; Video

'ಬರೀ ಸುಳ್ಳು.. ನಿಮ್ಮಿಂದಾಗಿ ಹೊಟೆಲ್ ನಲ್ಲಿ ಪಾತ್ರೆ ತೊಳೆಯಬೇಕಾಯಿತು': ಪಾಕ್ ವಿರುದ್ಧ ನಾಯಕ Shakeel Ammad Butt ಕಿಡಿ!

SCROLL FOR NEXT