ನೇತಾಜಿ ಸುಭಾಶ್ ಚಂದ್ರ ಬೋಸ್
ಕೋಲ್ಕತ: ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ ಚಂದ್ರ ಬೋಸ್ ಅವರ 64 ರಹಸ್ಯ ಕಡತಗಳನ್ನು ಬಹಿರಂಗಪಡಿಸಿದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು 1938ರಿಂದ 1947ರ ವರೆಗಿನ ಅವಧಿಗೆ ಸಂಬಂಧಪಟ್ಟ ಸಚಿವ ಸಂಪುಟದ ನೇತಾಜಿ ದಾಖಲೆ ಪತ್ರಗಳನ್ನು ಬಹಿರಂಪಡಿಸಿದ್ದಾರೆ.
ಸಚಿವ ಸಂಪುಟದ ಈ ದಾಖಲೆ ಪತ್ರಗಳು ಸ್ವಾತಂತ್ರ್ಯ ಪೂರ್ವ ಭಾರತಕ್ಕೆ ರಹಸ್ಯದ್ದಾಗಿತ್ತು ಆದರೆ ಈಗ ಅಲ್ಲ. ಹೀಗಾಗಿ ಅವುಗಳನ್ನು ಸಾರ್ವಜನಿಕರ ಅವಲೋಕನಕ್ಕೆ ತರಲು ತೀರ್ಮಾನಿಸಲಾಯಿತು ಎಂದು ಮಮತಾ ಬ್ಯಾನರ್ಜಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಚಿವ ಸಂಪುಟದ 401 ಸಭೆಗಳ ದಾಖಲೆ ಪತ್ರಗಳನ್ನು ಹಾಗೂ ಅವುಗಳ ಸಿಡಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಬಿಡುಗಡೆ ಮಾಡಿದೆ. ಈ ದಾಖಲೆಪತ್ರಗಳು ಸಂಬಂಧಪಡುವ ಅವಧಿಯಲ್ಲಿ ಐತಿಹಾಸಿಕ ಮಹತ್ವದ ಕ್ವಿಟ್ ಇಂಡಿಯಾ ಚಳವಳಿ, ಬಂಗಾಲದ ಮಹಾ ಕ್ಷಾಮ ಮತ್ತು ಬಂಗಾಲ ವಿಭಜನೆ ಮುಂತಾದ ವಿದ್ಯಮಾನಗಳು ಘಟಿಸಿವೆ
2013ರಲ್ಲಿ ನೇತಾಜಿ ರಹಸ್ಯ ಕಡತಗಳ ಕಂಪ್ಯೂಟರೀಕರಣ ಆರಂಭವಾಗಿತ್ತು. 1947ರ ಬಳಿಕದ ಹತ್ತು ವರ್ಷಗಳ ಅವಧಿಯ ಕ್ಯಾಬಿನೆಟ್ ದಾಖಲೆ ಪತ್ರಗಳ ಕಂಪ್ಯೂಟರೀಕರಣ ಈಗ ಸಾಗುತ್ತಿದೆ ಎಂದು ಮಮತಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos