ದೇಶ

ಕಿರಿಯ ಹುದ್ದೆಗಳಿಗೆ ನೇಮಕಾತಿ: 2016 ರಿಂದ ಸಂದರ್ಶನ ಪ್ರಕ್ರಿಯೆ ರದ್ದು?

Srinivas Rao BV

ನವದೆಹಲಿ: ಕಿರಿಯ ಹುದ್ದೆಗಳಿಗೆ ನೇಮಕಾತಿ ನಡೆಸುವ ವೇಳೆ ನಡೆಸಲಾಗುವ ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಖಾಸಗಿ ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಸಂದರ್ಶನ ಪ್ರಕ್ರಿಯೆ ಬದಲು 2016 ರ ಜನವರಿಯಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಕೌಶಲ್ಯ ಹಾಗೂ ದೈಹಿಕ ಸಾಮರ್ಥ್ಯದೊಂದಿಗೆ ಅಭ್ಯರ್ಥಿಗಳು ಆಯ್ಕೆಯಾಗುವುದಕ್ಕೂ ಮುನ್ನ ತಮ್ಮ ಅರ್ಹತೆಯನ್ನು ಸಾಬೀತುಪಡಿಸಬೇಕಾಗಿದೆ.
ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂದರ್ಶನದ ವೇಳೆ ನಡೆಯುವ ಶಿಫಾರಸ್ಸಿನ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಸಂದರ್ಶನ ಪ್ರಕ್ರಿಯೆಯಿಂದ  ಭ್ರಷ್ಟಾಚಾರ ಹೆಚ್ಚುತಿದೆ, ಶಿಫಾರಸ್ಸು ಸಂಸ್ಕೃತಿಯನ್ನು ತಡೆಗಟ್ಟಲು ಸಂದರ್ಶನ ಪ್ರಕ್ರಿಯೆಯನ್ನೇ ರದ್ದುಗೊಳಿಸುವುದಾಗಿ ತಿಳಿಸಿದ್ದರು.
2016 ರ ಜನವರಿಯಿಂದ ಸಂದರ್ಶನ ಪ್ರಕ್ರಿಯೆ ರದ್ದುಗೊಳ್ಳಲಿದ್ದು ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. 

SCROLL FOR NEXT