ನವದೆಹಲಿ: ಪಟೇಲ್ ಮೀಸಲು ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರು ಬುಧವಾರ ದೆಹಲಿಯಲ್ಲಿ ಹೊಸ ರಾಜಕೀಯ ಪಕ್ಷವೊಂದನ್ನು ಘೋಷಿಸಲಿದ್ದಾರೆ.
ಆದರೆ ಹಾರ್ದಿಕ್ ಪಟೇಲ್ ದೆಹಲಿಗೆ ಭೇಟಿ ನೀಡುವ ದಿನಾಂಕದ ಬಗ್ಗೆಯೇ ಕೇಂದ್ರ ಸರ್ಕಾರಕ್ಕೆ ಆತಂಕ ಇದೆ. ಹಾರ್ದಿಕ್ ಪಟೇಲ್‌ಗೆ ದೊರೆಯುತ್ತಿರುವ ಗುಜ್ಜರ್ ಮತ್ತು ರೈತರ ಬೆಂಬಲ ದೆಹಲಿಯ ಬೀದಿಗಳಲ್ಲೂ ಮೀಸಲು ಹೋರಾಟಕ್ಕೆ ಪ್ರಚೋದನೆ ನೀಡಬಹುದು ಎಂದು ಕೇಂದ್ರ ಮತ್ತು ಗುಪ್ತಚರ ಸಂಸ್ಥೆಗಳು ನಂಬಿವೆ.
ಕಳೆದ ಸೆಪ್ಟೆಂಬರ್ 30ರ ಭೇಟಿ ನಂತರ ಹಾರ್ದಿಕ್ ಪಟೇಲ್ ಇದೀಗ ಎರಡನೇ ಬಾರಿ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ, ಗುಜ್ಜರ್ ನಾಯಕರು ಹಾಗೂ ಭಾರತೀಯ ಕಿಸನ್ ಯೂನಿಯನ್ ಸಹ ಹಾರ್ದಿಕ್ ಪಟೇಲ್‌ಗೆ ಬೆಂಬಲ ಘೋಷಿಸಿವೆ. ಇದರಿಂದಾಗಿ ದೇಹಲಿಯಲ್ಲಿ ಅಹಮದಾಬಾದ್ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನಲ್ಲಿ 'ಒಬಿಸಿ' ಸ್ಥಾನಕ್ಕಾಗಿ ಹೋರಾಟ ನಡೆಸುವ ಮೂಲಕ ಪಟೇಲ್ ಸಮುದಾಯದ ನಾಯಕನಾಗಿ ಹೊರ ಹೊಮ್ಮಿರುವ 21 ವರ್ಷದ ಯುವಕ ಹಾರ್ದಿಕ್ ಪಟೇಲ್, ಈ ಹಿಂದೆ ಪ್ರತಿಭಟನೆಯ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದರು.