ದೇಶ

ಸರ್ಕಾರಿ ಜಾಹಿರಾತು: ಮನೀಶ್ ಸಿಸೋಡಿಯಾ ಸಂಬಂಧಿಕರಿಗೆ ಗುತ್ತಿಗೆ ನೀಡಿರುವ ಆರೋಪ

Srinivas Rao BV

ದೆಹಲಿ ಸರ್ಕಾರದ ಜಾಹಿರಾತುಗಳಿಗಾಗಿ ಮನೀಶ್ ಸಿಸೋಡಿಯಾ ಅವರ ಕುಟುಂಬ ಸದಸ್ಯರಿಗೆ ಗುತ್ತಿಗೆ ನೀಡಲಾಗಿರುವ ಬಗ್ಗೆ ದೂರು ಬಂದಿದೆ ಎಂದು ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಜಂಟಿ ಆಯುಕ್ತ ಮುಖೇಶ್ ಕುಮಾರ್ ಮೀನ ಹೇಳಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಮೀನ, ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಸಂಬಂಧಿಕರಿಗೆ ಗುತ್ತಿಗೆ ನೀಡಿರುವುದರ ಬಗ್ಗೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯಕ್ಕೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಜಂಟಿ ಆಯುಕ್ತರಿಗೂ ಸರ್ಕಾರಕ್ಕೂ ಭಿನ್ನಾಭಿಪ್ರಾಯಗಳಿದ್ದು ಎಸಿಬಿಗೆ ಇಬ್ಬರು ಮುಖ್ಯಸ್ಥರು ನೇಮಕವಾಗಿದ್ದಾರೆ. ಮುಖೇಶ್ ಕುಮಾರ್ ಮೀನ ಅವರನ್ನು ದೆಹಲಿ ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ನೇಮಕ ಮಾಡಿದ್ದರೆ. ದೆಹಲಿ ಸರ್ಕಾರ ಎಸ್ ಎಸ್ ಯಾದವ್ ಅವರನ್ನು ನೇಮಕ ಮಾಡಿದೆ.

ದೆಹಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಜಾಹಿರಾತು ಪ್ರಕಟಿಸಲು ಸುಮರು  526 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು.  ಜಾಹಿರಾತಿಗಾಗಿ 526 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದ ಆಮ್ ಆದ್ಮಿ ಪಕ್ಷದ ಕ್ರಮವನ್ನು ವಿರೋಧಪಕ್ಷಗಳು ಟೀಕಿಸಿದ್ದವು.

SCROLL FOR NEXT