ದೇಶ

ಹುಡುಗರಿಗೂ 18ಕ್ಕೆ ಮದುವೆ ವಯಸ್ಸು ನಿಗದಿಪಡಿಸಬೇಕು: ಸರ್ಕಾರೇತರ ಸಮಿತಿ ವರದಿ

Manjula VN

ನವದೆಹಲಿ: ಹುಡುಗ, ಹುಡುಗಿಯರಿಗಿಬ್ಬರಿಗೂ 18ಕ್ಕೆ ಮದುವೆ ವಯಸ್ಸು ನಿಗದಿಪಡಿಸಬೇಕೆಂದು ಕೇಂದ್ರ ನೇಮಿಸಿದ್ದ ಉನ್ನತಾಧಿಕಾರಿಗಳ ಸಮಿತಿಯೊಂದು ಇದೀಗ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಸಮಿತಿ ಸಲ್ಲಿಸಿರುವ ವರದಿಯಲ್ಲಿ 18 ವರ್ಷಕ್ಕೆ ಮೇಲ್ಪಟ್ಟ ಹುಡುಗ ಹಾಗೂ ಹುಡುಗಿಯರು ವಿವಾಹವಾಗುವುದನ್ನು ಕಾನೂನಾತ್ಮಕವೆಂದು ಪರಿಗಣಿಸಬೇಕಿದ್ದು, ಇಬ್ಬರಿಗೂ 18ಕ್ಕೆ ವಿವಾಹ ವಯಸ್ಸನ್ನು ನಿಗದಿಸಬೇಕೆಂದು ಹೇಳಿದೆ.

ಹಿಂದೂ ವಿವಾಹ ಕಾಯ್ದೆ ಸೇರಿ ಹಾಗೂ ಇನ್ನಿತರೆ ವಿಶೇಷ ವಿವಾಹ ಕಾಯ್ದೆಗಳಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷವನ್ನು ನಿಗದಿಪಡಿಸಲಾಗಿದೆ. ಇದರಿಂದಾಗಿ ವೈಯಕ್ತಿಕ ಕಾಯ್ದೆಗಳ ಮೂಲಕ ಲಿಂಗ ತಾರತಮ್ಯವನ್ನು ಮಾಡಲಾಗುತ್ತಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಅಲ್ಲದೆ, ವರದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ, ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ಮಹಿಳೆಯರಿಗೂ ಜೀವನಾಂಶ ನೀಡುವಂತೆ ಉಲ್ಲೇಖಿಸಲಾಗಿದೆ.

ವೈಯಕ್ತಿಕ ಕಾನೂನಿ ಬಗ್ಗೆ ಉಲ್ಲೇಖ
ವರದಿಯಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ವೈಯಕ್ತಿಕ ಕಾನೂನುಗಳ ಬಗ್ಗೆ ಉಲ್ಲೇಖ ಮಾಡಿರುವ ಅಧಿಕಾರಿಗಳು, ಮಹಿಳೆ ಮತ್ತು ಕುಟುಂಬಗಳ ಕಾನೂನು ಜೊತೆಗೆ ವಿವಾಹದ ಮೇಲಿನ ಗೌರವ, ವಿಚ್ಛೇದನ, ರಕ್ಷಣೆ, ಪಾಲನೆ ಮತ್ತು ಉತ್ತರಾಧಿಕಾರಗಳಲ್ಲಿಯೂ ಲಿಂಗ ತಾರತಮ್ಯಗಳನ್ನು ಮಾಡಲಾಗುತ್ತಿದ್ದೆ. ಇದರಿಂದಾಗಿ ತಲಾಖ್ ಮತ್ತು ಬಹುಪತ್ನಿತ್ವದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ತೆಗೆದುಹಾಕಬೇಕೆಂದು ಹೇಳಿದೆ. 

ಜೀವನಾಂಶ ಪದದ ಬದಲಾಗಿ ವಿತ್ತೀಯ ಅರ್ಹತೆ ಪದ ಬಳಕೆ ಮಾಡುವಂತೆ ಸಲಹೆ ನೀಡಿರುವ ಸಮಿತಿಯ ಇದರೊಂದಿಗೆ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಸಮ್ಮತವಲ್ಲದ ಮಗು, ಕನ್ ಕ್ಯುಬ್ಯೆನ್ಸ್ ಅಥವಾ ಕೀಪ್ ಗಳೆಂಬ ಪದ ಬಳಸಬಾರದೆಂದು ಶಿಫಾರಸು ಮಾಡಿದೆ.

ಮರ್ಯಾಯಾ ಹತ್ಯೆ ಪ್ರಕರಣಕ್ಕೆ ಕಾನೂನು ಅಗತ್ಯ
ಮರ್ಯಾಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಸಮಿತಿ ಸಲಹೆ ನೀಡಿದ್ದು. ಇಂತಹ ದಂಪತಿಗಳಿಗೆ ಕಾನೂನು ಅಡಿಯಲ್ಲಿ ರಕ್ಷಣೆ ನೀಡಬೇಕೆಂದು ಹೇಳಿದೆ. ಮಹಿಳೆಯರ ಮೇಲೆ ಮಾನಭಂಗ ಮಾಡುವಂತೆ ತೀರ್ಪು ನೀಡುವ ಪಂಚಾಯಿತಿ ಸದಸ್ಯರಿಗೆ ಶಿಕ್ಷೆ ನೀಡಬೇಕು.

ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆ ನೋಂದಣಿಗಾಗಿ 30 ದಿವಸಗಳ ಸಾರ್ವಜನಿಕ ಪ್ರಕಟಣೆ ಸಲ್ಲಿಸುವ ಅಗತ್ಯವಿದೆ. ಆದರೆ, ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ವಿವಾಹವಾಗುವವರಿಗೆ ಇದು ಸಮಸ್ಯೆಯನ್ನುಂಟು ಮಾಡಲಿದೆ. ಹೀಗಾಗಿ ಈ ಕಾಯ್ದೆಯನ್ನು ತೆಗೆದುಹಾಕಬೇಕಿದೆ. ಸೆಕ್ಷನ್ 497 ವ್ಯಭಿಚಾರಿ ಕಾಯ್ದೆ ಪುರಾತನ ಕಾಯ್ದೆಯಾಗಿದ್ದು, ಇದನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹೇಳಿದೆ.

ಇನ್ನು ಈ ವರದಿಯನ್ನು ಕೇಂದ್ರ ನೇಮಿಸಲಾಗಿದ್ದ 14 ಸದಸ್ಯರುಳ್ಳ ಉನ್ನಾತಾಧಿಕಾರಿಗಳ ಸಮಿತಿಯು ಸ್ಪಷ್ಟನೆಗಾಗಿ ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕಾರಿಗಳ ತಂಡ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಲಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

SCROLL FOR NEXT