ಮುಂಬೈ: ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕೆ ಎಂದು ಮುಂಬೈ ಹೈಕೋರ್ಟ್ ನೀಡಿರುವ ತೀರ್ಪನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿ ರಾಜ್ ಚೌವ್ಹಾಣ್ ಸ್ವಾಗತಿಸಿದ್ದಾರೆ.
ಹೈಕೋರ್ಟ್ ತೀರ್ಪನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಇಲ್ಲಿ ಪುರುಷ ಮಹಿಳೆ ಎಂಬ ಭೇದಭಾವವಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ನೀಡುತ್ತದೆ ಎಂದ ಅವರು, ಸಂಪ್ರಾದಾಯದ ಹೆಸರಲ್ಲಿ ಮಹಿಳೆ ಹಕ್ಕನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಕೆಲವು ಸಂಪ್ರದಾಯಗಳು ಮಹಿಳೆಯನ್ನು ಕೆಳ ಸ್ಥಾನಕ್ಕೆ ತಳ್ಳುತ್ತವೆ. ಅಂತಹ ಸಂಪ್ರದಾಯದ ಹೆಸರಲ್ಲಿ ಕೆಳಮಟ್ಟದಲ್ಲಿ ಮಹಿಳೆಯನ್ನು ಕಾಣಲಾಗುತ್ತದೆ. ಇಂತಹ ಸಂಪ್ರದಾಯಗಳನ್ನು ನಾವು ಒಪ್ಪಿಕೊಳ್ಳಬಾರದು. ಸಮಾಜದಲ್ಲಿ ಮಹಿಳೆ ಮತ್ತು ಪುರಷರಿಗೂ ಸಮಾನ ಹಕ್ಕು ಕೊಡಿಸಲು ನಾವು ಹೋರಾಡಬೇಕು. ಹಾಗೆಂದು, ಹಿಂಸಾಚಾರ ಮಾಡುವುದಲ್ಲ. ಸಮಾನ ಹಕ್ಕಿಗಾಗಿ ಶಾಂತಿಯಿಂದ ಹೋರಾಡಬೇಕು ಎಂದು ಅವರು ತಿಳಿಸಿದ್ದಾರೆ.
ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು. ಮಹಿಳೆಯರ ಈ ಹಕ್ಕನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಮುಂಬೈ ಹೈಕೋರ್ಟ್ ತೀರ್ಪು ನೀಡಿತ್ತು.